ಭಾಗ -೨ (ಯಾದ್ನ್ಯವಲ್ಕ್ಯ)
Audio available
Audio:

ಮಂಗಳೂರು ವಾಸ - ಹೈಸ್ಕೂಲು ವಿದ್ಯಾಭಾಸ
೧೯೭೧-೧೯೭೪
ಎಲ್ಲ ವಿಚಾರ ಪರಾಮರ್ಶೆ ನಂತರ ೧೯೭೧ರ ಶಾಲಾ ದಾಖಲಾತಿಯ ಹೊತ್ತಿಗೆ ನಾವು ಮಂಗಳೂರಿಗೆ ಬಂದೆವು. ಒಂದು ಎತ್ತಿನ ಗಾಡಿಯ ಸಾಮಾನು ತಂದೆವು. ಕೆಲವೊಂದು ಸಾಮಾನುಗಳನ್ನು ಇನ್ನೂ ಗೊಂಡಬಾಳಿನಲ್ಲಿಯೇ ಇಟ್ಟು ಬಂದಿದ್ದೆವು. ಇಂತಹ ವಸ್ತುಗಳಲ್ಲಿ ನನಗೆ ನೆನಪಿಗೆ ಬರುವ ಹಾಗೆ ಹಳೆಯ ಚಂದಮಾಮ ಪುಸ್ತಕಗಳು , ಜೊತೆಗೆ ಬಹುಶಹ ಗೋರಖಪುರ ಪ್ರೆಸ್ಸಿನವರು ಪ್ರಕಟಿಸಿರಿಬಹುದಾದ ತುಂಬಾ ಆಕರ್ಷಕ ಬಣ್ಣದ ಚಿತ್ರಗಳೂ ಇದ್ದ ಭಾಗವತ , ರಾಮಾಯಣ , ಮಹಾಭಾರತಗಳ ಪುಸ್ತಕಗಳು . ಅವನ್ನು ನಮ್ಮ ಮನೆಯಲ್ಲಿ ಇದ್ದ ಕಟ್ಟಿಗೆಯ ಕಪಾಟಿನಲ್ಲಿ ಇಟ್ಟು ಬಂದಿದ್ದೆವು. ಸರಿಯಾಗಿ ಬಾಗಿಲು, ಬೀಗ ಹಾಕದ ಮನೆಗೆ ಶಾಲಾ ಮಕ್ಕಳು ನುಗ್ಗಿ ಪುಸ್ತಕಗಳಲ್ಲಿನ ಚಿತ್ರಗಳಿಂದ ಆಕರ್ಷಿತರಾಗಿ ಎಲ್ಲ ಚಲ್ಲಾಪಿಲ್ಲಿ ಮಾಡಿ ಹೋಗಿದ್ದರು. ಆ ಪುಸ್ತಕಗಳ ಜೊತೆಗೆ ಇತರ ಕೆಲ ಪುಸ್ತಕಗಳೂ ಮತ್ತು ತಂದೆ ಬರೆದಿಟ್ಟಿದ್ದ ನಮ್ಮ ಮನೆಯವರ ಎಲ್ಲ ಜಾತಕಗಳೂ ಕಳೆದುಹೋದವು. ಅಲ್ಲಿಗೆ ಅಂದಿನಿಂದ ನಮಗೆ ಜಾತಕಗಳಿಂದ ಮುಕ್ತಿಯೂ ಸಿಕ್ಕಿತು!
ಟಿ ಬಿ ಕಾಯಿಲೆಯಿಂದ ಅಪ್ಪ ನಿತ್ರಾಣರಾಗಿ , ಅಸಹಾಯಕರಾಗಿ ನೆಲ ಹಿಡಿದಿದ್ದರು ಎಂದು ನಾನು ನಿಮಗೀಗಾಗಲೇ ಹೇಳಿದ್ದೇನೆ. ಮನೆಯ ವ್ಯವಹಾರವೆಲ್ಲ ಈಗ ಪೂರ್ತಿ ಅವ್ವನದಾಗಿತ್ತು. ನನಗೆ ಹೈಸ್ಕೂಲಿಗೆ ಸೇರಿಸಬೇಕಾದ ಕೆಲಸ ಅತ್ಯಂತ ಜರೂರಾಗಿ ಆಗಬೇಕಾಗಿತ್ತು. ಆದರೆ ಹೇಗೆ? ಅವ್ವ ಅನಕ್ಷರಸ್ಥಳು, ಅದೂ ಕೂಡ ವಿದ್ಯಾಸಂಸ್ಥೆಗೆ ಬರಲು ಒಂದು ರೀತಿಯ ಭಯ ಆಕೆಗೆ ಕಾಡಿರಬಹುದು . ಈ ಕಾರಣದಿಂದ ಮಂಗಳೂರುನಲ್ಲಿ ಪರಿಚಯವಿದ್ದ ,ಆರ್ ಎಮ್ ಪಿ ಡಾಕ್ಟರ ಜೊತೆಗೆ ಕಳಿಸಿ ಊರಿನ ಟಿ ಡಿ ಬಿ ಅಂದರೆ ತಾಲ್ಲೂಕು ಅಭಿವೃದ್ಧಿ ಬೋರ್ಡ್ - ಅಂದರೆ ಸರಕಾರೀ ಶಾಲೆಗೆ ಸೇರಿಸಲಾಯಿತು.
ಆಗ ಮಂಗಳೂರಿನ ಮನೆಯಲ್ಲಿ ಇದ್ದವರು ನಾವು ಅಂದರೆ ಅಪ್ಪ, ಅವ್ವ, ಅಕ್ಕ ಹಾಗೂ ನಾನು - ನಾಲ್ಕು ಜನ ಮಾತ್ರ. ಅದು ಬವಣೆಯ ಬದುಕು .
೧೯೭೧ ರ ಪಾಕಿಸ್ತಾನದ ಯುದ್ಧದ ನಂತರ ದೇಶದ ಹಸಿವಿನ ಸ್ಥಿತಿಯೂ ಎಲ್ಲರಿಗೂ ತಟ್ಟಿತ್ತು. ನಮಗೆ ಗೊಂಡಬಾಳಿನಂತೆ ಇಲ್ಲಿಯೂ ಜಮೀನಿನ ಆದಾಯ ಇರಲಿಲ್ಲ . ಅಪ್ಪ ಹಾಸಿಗೆ ಹಿಡಿದಿದ್ದ . ಒಂದೇ ವ್ಯತ್ಯಾಸವೆಂದರೆ ಇರಲು ಮನೆ ಹಾಗೂ ನನ್ನ ವಿದ್ಯಾಭ್ಯಾಸಕ್ಕೆ ಒಂದು ದಾರಿ ಸಿಕ್ಕಿತ್ತು. ಆಗ ಅಣ್ಣಂದಿರು ಕಳಿಸುತ್ತಿದ್ದ ೪೦-೫೦ ರೂಪಾಯಿಗಳಲ್ಲೇ ನಾಲ್ಕು ಜನರ ಜೀವನ ಸಾಗಬೇಕಾಗಿತ್ತು. ಮನೆಯಲ್ಲಿದ್ದ ಒಬ್ಬನೇ ಗಂಡುಮಗನಾದ ನಾನು ಆಗಿನಿಂದಲೇ ಮನೆ ಸಾಮಾನು ತರುವ ಮತ್ತು ಇತರೆ ಕೆಲಸ ಮಾಡಲು ಕಲಿಯತೊಡಗಿದೆ. ನನ್ನ ಓದು ಯಾವುದೇ ತೊಂದರೆಯೂ ಇಲ್ಲದೆ , ಸಾಧನೆಯೂ ಇಲ್ಲದೆ ಸರಾಗವಾಗಿ ಹರಿಯುವ ನದಿಯಂತೆ ನಡೆಯುತ್ತಿತ್ತು. ಆರ್ಥಿಕ ಹೊಡೆತದಿಂದ ಪಾರಾಗಲು ಅವ್ವ , ಅಕ್ಕ ಸಾಹಸಪಡುತ್ತಿದ್ದರು .
ಅನೇಕ ಉತ್ತರ ಕರ್ನಾಟಕದ ಹಳ್ಳಿಗಳಂತೆ ನಮ್ಮ ಊರಿನಲ್ಲೂ ನೀರಿಗೆ ತತ್ವಾರವಿತ್ತು. ಅದರಲ್ಲೂ ಕುಡಿಯುವ ನೀರಿಗಂತೂ ಹಳ್ಳಗಳ ಒರತೆಗಳನ್ನೇ ಆಶ್ರಯಿಸಬೇಕಾಗಿತ್ತು. ಊರಿನ ಹತ್ತಿರವಿದ್ದ ಒಣಗೇರಿ ಹಳ್ಳದಲ್ಲಿ ಒಂದು ಒರತೆ ತೋಡಿ ಇಷ್ಟಿಷ್ಟೇ ಬರುತ್ತಿದ್ದ ನೀರನ್ನು ಬಟ್ಟಲಿನಿಂದ ತುಂಬಿ ಕೊಡಕ್ಕೆ ಹಾಕಬೇಕಾಗಿತ್ತು.
ನಾನಾಗ ೯ನೇ ತರಗತಿಯಲ್ಲಿದ್ದೆ. ಅಣ್ಣಂದಿರು ಅವರ ಆದಾಯದ ಕೊರತೆಯಿಂದಾಗಿ ಒಂದೊಂದು ಸಲ ಹಣ ಕಳಿಸುವುದು ತಡವಾಗುತ್ತಿತ್ತು- ಅದೂ ಆಗ ಇದ್ದುದು ಗ್ರೇಟ್ ಬ್ರಿಟಿಷ್ ಸಾಧನವಾದ ಎಂ ಓ ಮೂಲಕ ! ಕಿರಾಣಿ ಸಾಮಾನು ಉದ್ರಿ ಕೊಟ್ಟಿರುತ್ತಿದ್ದ ಅಂಗಡಿಯವನ ವರಾತ ಜೋರಾಗಿರಿತ್ತಿತ್ತು. ಅಂತಹ ಸಂದರ್ಭದಲ್ಲಿ ನಾನು ಓದಲು ಹೋಗುತ್ತಿದ್ದ ಪಾಟೀಲ್ ಮಾಸ್ತರರ ಕಟ್ಟೆ ಸೇರಲು , ಎಂದಿನಂತೆ ಆ ಅಂಗಡಿಯ ದಾರಿಯ ಮೂಲಕ ಹೋಗದೆ ಬೇರೆಯದೇ ದಾರಿ ಹುಡುಕಬೇಕಾಗುತ್ತಿತ್ತು. ಅಂತೂ ಕಳ್ಳನಂತೆ ಯಾವುದೋ ಸಂದಿಯ ದಾರಿಯ ಹಿಡಿದು ಓದುವ ಕಟ್ಟೆ ಸೇರುತ್ತಿದ್ದೆ .
ಅಂದಿನ ಪರಿಸ್ಥಿತಿ ತುಂಬಾ ಕಷ್ಟದಾಯಕವಾಗಿತ್ತು. ಊಟಕ್ಕೂ ತತ್ವಾರದ ಪರಿಸ್ಥಿತಿ ಇತ್ತು. ಇಂತಹ ಒಂದು ಸಂದರ್ಭದಲ್ಲಿ ಆಗ ನಮ್ಮ ಊರಿನ ಸರಕಾರೀ ಆಸ್ಪತ್ರೆಗೆ ಒಬ್ಬ ಬ್ರಾಹ್ಮಣ ಡಾಕ್ಟ್ರರು ಬಂದರು. ಅವರಿಗೂ ನೀರಿನ ಸಮಸ್ಯೆ ತಟ್ಟಿತು. ಅವರ ಮನೆಗೆ ನೀರು ತರಲು ಒಬ್ಬರ ಅವಶ್ಯಕತೆ ಉಂಟಾಯಿತು. ಅದು ಹೇಗೋ ನಮ್ಮ ಅವ್ವನಿಗೆ ತಿಳಿದು ನನ್ನನ್ನು ಆ ಕೆಲಸಕ್ಕೆ ನೇಮಿಸಿ ಮನೆಗೆ ತಿಂಗಳಿಗೆ ೧೦-೧೫ ರೂಪಾಯಿ ಪಡೆಯುವಂತಾಯಿತು. ಇಲ್ಲಿ ಒಂದು ವಿಷಯ ಹೇಳಬೇಕು. ಆ ಡಾಕ್ಟರರು ಬಾಡಿಗೆಗೆ ಇದ್ದುದು ನಮ್ಮ ಸೋದರತ್ತೆಯ ಮನೆಯಾಗಿತ್ತು. ನಮ್ಮ ಸೋದರತ್ತೆಯ ಜೊತೆಗೆ ನಮ್ಮ ಕುಟುಂಬದ ಸಂಬಂಧ ಸರಿಯಿರಲಿಲ್ಲ. ಸ್ವಂತ ಅಣ್ಣನ ಮಗನಾಗಿದ್ದರೂ ನಾವು ಮಂಗಳೂರಿನಲ್ಲಿ ಇದ್ದಷ್ಟು ದಿನ ನಮ್ಮ ಸೋದರತ್ತೆ ಒಂದು ದಿನವೂ ನನ್ನನ್ನು ಮಾತನಾಡಿಸಲಿಲ್ಲ. ನಾನೂ ಸಹ ಆ ಸಾಹಸಕ್ಕಿಳಿಯಲಿಲ್ಲ. ಅತ್ತೆ ಅಲ್ಲಿ ವಾಸವಿರದಿದ್ದರೂ ಡಾಕ್ಟರರು ಬಾಡಿಗೆಗಿದ್ದ ಮನೆಯಾದ್ದರಿಂದ ನಾನು ಆ ಮನೆಗೆ ಹೋಗಬೇಕಾಯಿತು. ಆದರೆ ದುರದೃಷ್ಟವಶಾತ್ ನನ್ನ ಸೇವೆ ೨-೩ ತಿಂಗಳೂ ನಡೆಯಲಿಲ್ಲ.
ಪಾಟೀಲ ಮಾಸ್ತರರ ಕಟ್ಟೆ
ನಿರಾಯಾಸವಾಗಿ ೮ನೇ ತರಗತಿ ಪಾಸಾಗಿ ೯ನೇ ತರಗತಿಗೆ ಕಾಲಿಟ್ಟಿದ್ದೆ. ಆಗ ನನ್ನ ಸಹಪಾಠಿ ಅದಿವೆಪ್ಪ ಉಪ್ಪಾರ . ಇಬ್ಬರ ಸ್ನೇಹವೂ ಆತ್ಮೀಯವೂ ಪರಸ್ಪರ ಪೂರಕವೂ ಆಗಿತ್ತು. ಅವನೂ ನನ್ನ ಜೊತೆ ರಾತ್ರಿ ಓದಲು ಮತ್ತು ಅಲ್ಲಿಯೇ ಮಲಗಲು ಪಾಟೀಲ ಮಾಸ್ತರರ ಮನೆ ಸೇರಿದ. ಶಾಲೆ , ಮನೆ ,ಮನೆ ಕೆಲಸ ಹಾಗೂ ಓದು ಇದು ನನ್ನ ಜೀವನವಾಯಿತು. ರಾತ್ರಿ ೬ ಗಂಟೆಯಿಂದ ಬೆಳಗಿನ ೭ ಗಂಟೆಯವರೆಗೆ ನಾವು ಆ ಕಟ್ಟೆಯ ಮೇಲಿರುತ್ತಿದ್ದೆವು . ಅಲ್ಲಿಯೇ ನಮ್ಮ ಹಾಸಿಗೆ ಮತ್ತು ಪುಸ್ತಕಗಳಿರುತ್ತಿದ್ದವು.
ಹೀಗಿರುವಾಗ ಮನೆಯ ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತ ಸಾಗಿತ್ತು. ಟಿ ಬಿ ಕಾಯಿಲೆಯಿಂದ ಅಪ್ಪನ ನರಳಾಟವೂ ಇಮ್ಮಡಿಸುತ್ತಿತ್ತು. ಆರ್ಥಿಕ ಪರಿಸ್ಥಿಯ, ಭವಿಷ್ಯದ ಚಿಂತೆ ಬೆಂಬಿಡದೆ ಅವ್ವ, ಅಕ್ಕ ಮತ್ತು ನನ್ನನ್ನು ಕಾಡುತ್ತಿತ್ತು. ೧೯೭೩ರ ದಸರೆಯ ಎರಡನೇ ದಿನ ಅಪ್ಪ ಮರಣ ಹೊಂದಿದರು. ಎಂದಿನಂತೆ ಮುಂದಿನ ಎಲ್ಲ ಕಾರ್ಯಗಳಿಗೆ ಅಕ್ಕ ಅಣ್ಣಂದಿರು ಬಂದು ಸೇರಿದರು. ಅಂತಿಮ ಶವ ಸಂಸ್ಕಾರಕ್ಕೆ ಚಿಕ್ಕವನೆಂದು ನನ್ನನ್ನು ಕರೆದುಕೊಂಡು ಹೋಗಲಿಲ್ಲ . ನಮ್ಮೂರ ಹತ್ತಿರವೇ ಇರುವ ಹಳ್ಳದ ದಂಡೆಯಲ್ಲಿ ಸಂಸ್ಕಾರವಾದಂತೆ ನೆನಪು. ಸಂಸ್ಕಾರ ಕ್ರಿಯೆಗಳೆಲ್ಲ ಮುಗಿದ ನಂತರ ಎಲ್ಲರೂ ಅವರವರ ಊರಿಗೆ ಮರಳಿದರು. ದೊಡ್ಡ ಅಣ್ಣನು ತನ್ನ ಬವಣೆಯ ಕಾರಣಕ್ಕಾಗಿ ಹೆಂಡತಿಯನ್ನು ನಮ್ಮೊಡನೆ ಬಿಟ್ಟು ತಾನು ಮಾತ್ರ ಮರಳಿದ . ಕೆಲವು ವಾರಗಳ ನಂತರ ಅವರೂ ತಮ್ಮ ತವರು ಮನೆಗೆ ಹೊರಟು ಹೋದರು .
ಅಪ್ಪನ ಮರಣದ ನಂತರ ನಾವು ಮೂವರು ಅವ್ವ, ಅಕ್ಕ ಮತ್ತು ನಾನು ಆತ್ರ ಊರಿನಲ್ಲುಳಿದೆವು. ಇಬ್ಬರು ಅಣ್ಣಂದಿರು ಚಿತ್ರದುರ್ಗದಲ್ಲೂ , ಇನ್ನಿಬ್ಬರು ಪೂನಾದಲ್ಲೂ ಇದ್ದು ಜೀವನ ಸಾಗಿಸುತ್ತಿದ್ದರು. ಅವರದೂ ಪರಿಸ್ಥಿತಿ ಶೋಚನೀಯವಾದಂತಿತ್ತು. ನನಗೆ ಅದರ ವಿವರ ಹೆಚ್ಚು ತಿಳಿಯದು.
ಈ ಹೊತ್ತಿಗೆ ಪಾಟೀಲ ಮಾಸ್ತರರ ಮನೆ- ಕಟ್ಟೆಗೆ ಓದಲು ಇನ್ನೊಬ್ಬ ಸಹಪಾಠಿ ತಿಮ್ಮಣ್ಣ - ತಿಮ್ಮ ಅಂದರೆ ತಿರುಮಲ ದೇಶಪಾಂಡೆ ಬಂದು ಸೇರಿದ. ಅವನು ನಮ್ಮಿಬ್ಬರಂತಲ್ಲ - ಸ್ಥಿತಿ ವಂತ ಮತ್ತು ನಾನಾ ಶೋಕಿಗಳಿದ್ದವ ! ಸಹವಾಸದಿಂದ ಸನ್ಯಾಸಿ ಕೆಟ್ಟ ಎನ್ನುವ ಹಾಗೆ , ಅವನಿಂದ ನಾನು “ ಕುಣಿಬಿಲ್ಲೆ” ಆಟದ ವ್ಯಸನಕ್ಕೊಳಗಾದೆ.
ಕುಣಿಬಿಲ್ಲೆ ಆಟ
ಬರದ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಜೂಜುಕೋರರಿಗೂ, ಶೋಕೀವಾಲಾಗಳಿಗೂ ಹಾಗು ಮಧ್ಯವ್ಯಸನಿಗಿಳಿಗೂ ಬರವಿಲ್ಲ ! ಇಂತಹ ಒಂದು ಸಾಂದರ್ಭದಲ್ಲಿ ನಾನು ತಿಮ್ಮಣ್ಣನಿಂದ ಕುಣಿಬಿಲ್ಲೆ ಆಟ ಆಡಲು ಕಲಿತೆ. ಕುಣಿಬಿಲ್ಲೆ ಆಟ ಎಂದರೆ ಒಂದು ಜಾಗದಿಂದ ೮-೧೦ ಅಡಿ ದೂರದಲ್ಲಿ ಒಂದು ೩-೪ ಅಂಗುಲ ಗುಂಡಿ ತೋಡಿ , ಆಟ ಆಡಲು ಬಯಸುವ ಎಲ್ಲರಿಂದ ಸಮನಾಗಿ ಸಂಗ್ರಹಿಸಿದ ನಾಣ್ಯಗಳನ್ನು ಹಿಡಿದು ಕುಣಿಯಿಂದ ೮-೧೦ ಅಡಿ ದೂರದ ಗೆರೆಯಿಂದ ಕುಣಿಯತ್ತ ನಾಣ್ಯಗಳನ್ನು ತೂರಬೇಕು . ಕುಣಿಯಲ್ಲಿ ಬಿದ್ದ ನಾಣ್ಯಗಳು ಅವನವು . ನಂತರ ಇನ್ನಷ್ಟು ಗೆಲ್ಲಬೇಕಾದರೆ ಮುಂದಿನ ಆಟಗಾರ ತೋರಿಸುವ ನಾಣ್ಯವನ್ನು ‘ಬಚ್ಚ’ ಎಂದು ಕರೆಯುವ ಕಲ್ಲಿನಿಂದ ಬೇರೆ ನಾಣ್ಯಗಳಿಗೆ ತಾಕದಂತೆ ಹೊಡೆಯಬೇಕು. ಅದೊಂದೇ ನಾಣ್ಯಕ್ಕೆ ತಾಕಿದರೆ ಎಲ್ಲ ಹಣವೂ ಅವನದು , ಬೇರೆ ನಾಣ್ಯಗಳಿಗೆ ತಾಕಿದರೆ ದಂಡ ಕಟ್ಟಬೇಕು . ಇದು ಆಟದ ಸರಳ ವಿವರಣೆ. ಈ ಆಟಕ್ಕೆ ಕುಶಲತೆ, ಅನುಭವ ಹಾಗೂ ಎಲ್ಲ ಜೂಜುಗಳಂತೆ ಅದೃಷ್ಟ ಬೇಕು. ಅದಾವುದೂ ನನ್ನಲ್ಲಿರಲಿಲ್ಲ. ಹಾಗಾಗಿ ದಿನನಿತ್ಯವೂ ನಾನು ಹಣ ಸೋಲುತ್ತಿದ್ದೆ.
ಈ ವಿಷಯ ಹೇಗೋ ನನ್ನ ಮನೆಗೆ ತಲುಪಿತು. ಮನೆಯಲ್ಲಿ ರಣ ರಂಪವಾಯಿತು. ಮಗ ಸಹವಾಸದಿಂದ ಜೂಜಿನ ವ್ಯಸನಕ್ಕೆ ಒಳಗಾದ ಎಂದು ಅವ್ವನಿಗೆ ಭಯವಾಯಿತು. ಆತಂಕವೂ ಮನೆ ಮಾಡಿತು. ಆಗಿನ ಕಾಲಕೇ ೧-೨ ರೂಪಾಯಿಗಳೂ ನಮಗೆ ಭಾರೀ ದೊಡ್ಡ ಮೊತ್ತವಾಗಿತ್ತು. ಇಡೀ ತಿಂಗಳು ನಾವು ೪೦-೫೦ ರೂಪಾಯಿಗಳಲ್ಲಿ ಬದುಕುತ್ತಿದ್ದೆವಲ್ಲ ! ಅದಾಗಲೇ ಅಪ್ಪ ತೀರಿಕೊಂಡಿದ್ದ . ಅವ್ವ ಆಗ, ಈ ಮೊದಲು ನನ್ನನ್ನು ಶಾಲೆಗೆ ಸೇರಿಸಲು ಜೊತೆಗೆ ಬಂದಿದ್ದ ಅದೇ ಆರ್ ಎಂ ಪಿ ಡಾಕ್ಟರರಿಂದಲೂ, ಅಡಿವೆಪ್ಪನಿಂದಲೂ ನನಗೆ ಬುದ್ಧಿ ಹೇಳಿಸಿ ಕುಣಿಬಿಲ್ಲೆಯ ವ್ಯಸನದಿಂದ ನನ್ನನ್ನು ದೂರ ಮಾಡಿದಳು . ಅದರಿಂದ ಜೀವನ ಪಾಠ ಕಲಿತ ನಾನು ಇಡೀ ಜೀವನದಲ್ಲಿ ಮುಂದೆಂದೂ ಯಾವ ಜೂಜಿಗೂ, ವ್ಯಸನಕ್ಕೂ ಒಳಗಾಗಲಿಲ್ಲ. ಆದ್ದರಿಂದ ಇಂದಿಗೂ ನನಗೆ ಟೈಂ ಪಾಸಿಗಾಗಿಯಾದರೂ ಇಸ್ಪೀಟ್ ಆಟ ಆಡಲು ಬರದಂತಾದ ಗಂವಾರನಾದೆ .
ಎಸ್ ಎಸ್ ಎಲ್ ಸಿ
ಇಂತಹ ಅನೇಕ ಬೆಳವಣಿಗೆಗಳ ನಡುವೆ ೧೯೭೪ರಲ್ಲಿ ನಾನು ೧೦ನೇ ತರಗತಿಯ್ದಲ್ಲಿದ್ದೆ . ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶಗಳಂತೆ , ಶಾಲೆಯ ವಾತಾವರಣವೂ, ಮನೆಯ ವಾತಾವರಣವೂ ಅಷ್ಟೇನೂ ಉತ್ತೇಜಕವಾಗಿರಲಿಲ್ಲ. ಹೀಗಿದ್ದರೂ ನಾನೂ ಅಡಿವೆಪ್ಪನೂ ತುಂಬಾಪರಿಶ್ರಮ ಪಡುತ್ತಿದ್ದೆವು. ಆಗ ನಮಗೆ ಇಂಗ್ಲೀಷಿನ ಭಯ ಈಗಿನ ಕರೋನಾಭಯಕ್ಕಿಂತಲೂ ಹಿರಿದಾಗಿತ್ತು. ಬಾಯಿ ಪಾಠ ಮಾಡಿದ ಉತ್ತರಗಳು , ವಾಕ್ಯಗಳು ಮತ್ತು ಓದಿದ ಕೆಲ ಪದಗಳ ಹೊರತಾಗಿ ನಮಗೆ ಬೇರೇನೂ ಬರುತ್ತಿರಲಿಲ್ಲ. ಆದರೂ ಬೇರೆಯ ಸಹಪಾಠಿಗಳಿಗೆ ಹೋಲಿಸಿದರೆ ನಾವೇ ಮೇಲಾಗಿದ್ದೆವು! ಕನ್ನಡ ಪಾಠ ಮಾಡಲು ಹುಲಿ ಮಾಸ್ತರರೂ , ವಿಜ್ಞಾನ ಹಾಗೂ ಇಂಗ್ಲಿಷ್ ಪಾಠಮಾಡಲು ಕಟ್ಟಿ ಮಾಸ್ತರರೂ ಇದ್ದರು. ಉಳಿದವರ ನೆನಪು ಬಾರದು.
ತಾಲೂಕು ಕೇಂದ್ರವಾದ ಯಲಬುರ್ಗಾ - ಇದು ಮಂಗಳೂರಿನಿಂದ ೫೦-೬೦ ಕಿ ಮೀ ದೂರದಲ್ಲಿದೆ. ಆಗ ಅಲ್ಲಿಗೆ ಬಸ್ಸಿನ ಸೌಕರ್ಯವಿತ್ತು. ಅದು ನಮ್ಮ ೧೦ ನೇ ತರಗತಿಯ ಪಬ್ಲಿಕ್ ಪರೀಕ್ಷಾ ಕೇಂದ್ರ. ೭ನೇ ತರಗತಿಯ ಪಬ್ಲಿಕ್ ಪರೀಕ್ಷೆಯಂತೇ ಈಗಲೂ ಅಲ್ಲಿಗೆ ಹೇಗೆ ಹೋಗುವುದು ,ಅಲ್ಲಿ ಎಲ್ಲಿ ಇರುವುದು, ಹೇಗೆ ನಿಭಾಯಿಸುವುದು ಎಂಬಿತ್ಯಾದಿ ಪ್ರಶ್ನೆಗಳನ್ನು ಈಗ ನಾನು ಸ್ವತಃ ಎದುರಿಸಬೇಕಾಗಿತ್ತು. ಹಣದ ಸಮಸ್ಯೆ , ಊಟ ವಸತಿಯ ಸಮಸ್ಯೆ ಇತ್ಯಾದಿ. ಈಗಲೂ ಉತ್ತರ ಕರ್ನಾಟಕದ ಅನೇಕ ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವಂತೆ , ಕಿಟಕಿಯ ಮೂಲಕ ಕಾಪಿ ಚೀಟಿ ಸರಬರಾಜು ಮಾಡಲು ಪ್ರತಿಯೊಬ್ಬ ವಿದ್ಯಾರ್ಥಿ- ಅಥವಾ ಅವರ ತಂದೆ ತಾಯಿ ಬೇರೊಬ್ಬ ವ್ಯಕ್ತಿಯನ್ನೋ , ಹುಡುಗನನ್ನೋ ನೇಮಿಸಿಕೊಳ್ಳಬೇಕಾಗಿತ್ತು ! ಆ ಭಾಗ್ಯ ನನಗೂ, ಅಡಿವೆಪ್ಪನಿಗೂ ಇರಲಿಲ್ಲ . ನಮಗೇ ಊಟ, ವಸತಿಯ ಕಷ್ಟವಾಗಿದ್ದಾಗ , ನಾವು ಇನ್ನೊಬ್ಬರನ್ನು ನೇಮಿಸಿಕೊಂಡು ಅವರ ಊಟ ವಸತಿಯ ವ್ಯವಸ್ಥೆ ಮಾಡಿಕೊಟ್ಟು ಅವರ ಇತರೆ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲು ಸಾಧ್ಯವೇ ಇರಲಿಲ್ಲ . ನನಗೆ, ಅಡಿವೆಪ್ಪನಿಗೆ ಹೇಗೋ ಇತರೆ ಕೆಲ ಹುಡುಗರಿಗೆ ಎರಡು ದಿನಕ್ಕೊಮ್ಮೆ ಊರಿನಿಂದ ಊಟದ ಬುತ್ತಿ ಬರುತ್ತಿತ್ತು. ನಾನೂ ಅಡಿವೆಪ್ಪನೂ ಆತ್ಮೀಯವಾಗಿದ್ದುದರಿಂದ ಹಂಚಿಕೊಂಡು ಜೊತೆಗೂಡಿ ತಿನ್ನುತ್ತಿದ್ದೆವು. ಅಂತೂ ಪರೀಕ್ಷೆ ಬರೆದು ಬಂದೆವು.
ಆಗ ಒಂದು ದಿನ ಈ ಘಟನೆ ನಡೆಯಿತು. ಯಲಬುರ್ಗಾದಲ್ಲಿ ಆಗ ಲಿಂಗಾಯಿತ-ವೀರಶೈವರಿಗೆ ಸೇರಿದ ಎರಡು ಮಠಗಳು ಮುಖ್ಯವಾಗಿ ಅವರ ಜಾತಿಯವರಿಗಾಗಿ ಬೇರೆ ಬೇರೆಯಾಗಿ ಊಟದ ವ್ಯವಸ್ಥೆ ಮಾಡುತ್ತಿದ್ದವು. ಆಗ ನನಗೆ ಆ ಎರಡು ಪಂಗಡಗಳ ನಡುವೆ ವ್ಯತ್ಯಾಸ ಗೊತ್ತಿರಲಿಲ್ಲ. ಅಂತೂ ಆ ಎರಡು ಮಠಗಳ ನಡುವೆ ಒಂದು ರೀತಿಯ ಸ್ಪರ್ದ್ಧೆ ಹಾಗೂ ದ್ವೇಷ ಇದ್ದು ಹೆಚ್ಚು ಹೆಚ್ಚು ಹುಡುಗರನ್ನು ಸೆಳೆಯುವ ಗುರಿಯಿಟ್ಟುಕೊಂಡಿದ್ದವು. ಅಂತಹ ಒಂದು ದಿನ ನಾನೂ, ಅಡಿವೆಪ್ಪನೂ ಮತ್ತೊಬ್ಬ ಕಾಪಿ ಚೀಟಿ ಕೊಡಲು ಬಂದಿದ್ದ ಚಿನಿವಾಲರ- ಬ್ರಾಹ್ಹ್ಮಣ ಹುಡುಗನೊಬ್ಬ ಯಾವುದೊ ಬಹುಷಃ ವೀರಶೈವ ಸಂಪ್ರದಾಯದ ಮಠವೊಂದಕ್ಕೆ ಸೇರಿದ್ದ ಮಠಕ್ಕೆ ಊಟ ಮಾಡಲು ಹೋಗಿದ್ದೆವು. ಅಲ್ಲಿ ಅವರು ಜಂಗಮರು ಮತ್ತು ವೀರಶೈವರನ್ನು ಮಾತ್ರ ಒಂದು ಎತ್ತರದ ಕಟ್ಟೆಯ ಮೇಲೆ ಕೂಡಿಸುತ್ತಿದ್ದರು. ಇತರರೆಲ್ಲ ಕೆಳಗಿನ ಸ್ಥಳದಲ್ಲಿ. ನಾನೂ ಅಡಿವೆಪ್ಪನೂ ಕೆಳಗೆ ಕುಳಿತೆವು. ಚಿನಿವಾಲರ ಬ್ರಾಹ್ಮಣ ಹುಡುಗ ಮಾತ್ರ ಯಾರಿಗೂ ತಿಳಿಯದು ಎಂತಲೋ , ಅಥವಾ ನಾವೇನೂ ಕಡಿಮೆಯಲ್ಲ ಎಂತಲೋ ಕಟ್ಟೆಯ ಮೇಲೆಯೇ ಕುಳಿತ. ಅಷ್ಟರಲ್ಲಿ ನಾವೇ ತೆಗೆದುಕೊಂಡು ಹೋಗಿದ್ದ ತಟ್ಟೆಯಲ್ಲಿ ಊಟ ಬಡಿಸಿಯಾಗಿತ್ತು. ಅದ್ಹೇಗೆ ಕಂಡು ಹಿಡಿದರೋ ನಾ ಕಾಣೆ . ಇವನು ಜಂಗಮನಲ್ಲ, ವೀರಶೈ ವನೂ ಅಲ್ಲ , ಆದರೆ ಕಟ್ಟೆಯ ಮೇಲೆ ಕುಳಿತಿದ್ದಾನೆ ಎಂದು ಬೈದು ಊಟದ ಸಾಲಿನಿಂದ ಎಬ್ಬಿಸಿ ಕೆಳಕ್ಕೆ ಕಳಿಸಿದರು . ಅಂದಿನಿಂದ ಮತ್ತೆ ನಾನು ಎಂದೂ ಅಂದರೆ ಪರೀಕ್ಷೆಯುದ್ದಕ್ಕೂ ಆ ಮಠದ ಕಡೆ ಮತ್ತೆ ತಲೆ ಹಾಕಲಿಲ್ಲ.
ಪರೀಕ್ಷಾ ಫಲಿತಾಂಶ
ನಮ್ಮ ಶಾಲೆಯಿಂದ ನಾವು ೧೮-೨೦ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದೆವು . ಕೆಲ ತಿಂಗಳ ನಂತರ ಫಲಿತಾಂಶವೂ ಬಂತು. ಮಿಶ್ರಫಲ . ಒಂದು ಕಡೆ ಸಂತೋಷವೂ, ಇನ್ನೊಂದು ಕಡೆ ದುಃಖವೂ ಆಗಿತ್ತು. ಕಾರಣ ನಮ್ಮ ಶಾಲೆಯಿಂದ ಬರೆದಿದ್ದ ಮಕ್ಕಳಲ್ಲಿ ಇಬ್ಬರು ಮಾತ್ರ ಪಾಸಾಗಿದ್ದರು. ಅದರಲ್ಲಿ ನಾನೊಬ್ಬನಾಗಿದ್ದೆ . ಆ ಇನ್ನೊಬ್ಬ ನನ್ನ ಮಿತ್ರ ಅಡಿವೆಪ್ಪನಾಗಿರಲಿಲ್ಲ. ನಮಗೆಲ್ಲ ಭಯ ಬೀಳಿಸಿದ್ದ ಆ ಇಂಗ್ಲಿಷ್ ರಾಕ್ಷಸ ನನ್ನೆಲ್ಲ ಸಹಪಾಠಿಗಳನ್ನು ನೆಲ ಕಚ್ಚುವಂತೆ ಮಾಡಿದ್ದ. ನಾನೂ , ಪಾಸಾದ ಆ ಇನ್ನೊಬ್ಬ ಸಹಪಾಠಿಯೂ ಇಂಗ್ಲೀಷಿನಲ್ಲಿ ಪಾಸಾಗಲು ಕನಿಷ್ಠ ಎಷ್ಟು ಅಂಕಗಳು ಬೇಕಾಗಿದ್ದವೋ ಅಷ್ಟನ್ನು ಮಾತ್ರ ಪಡೆದು ಉತ್ತೀರ್ಣರಾಗಿದ್ದೆವು. ಅಂತೂ ನಿಟ್ಟುಸಿರು ಬಿಡುವಂತಾಯಿತು. ಈಗ ಇಂಗ್ಲೀಷ ಕಲಿತಿದ್ದರೂ , ಆಗಿನ ನನ್ನಂಥವರ ಭಾವನೆಯನ್ನು ಸ್ವತಃ ಅರಿತ ನಾನು ಈಗಲೂ ಗ್ರಾಮೀಣ ಮಕ್ಕಳು ಇಂಗ್ಲೀಷ್ ಕಲಿಯಲಿ ಪಡುವ ಪಡಿಪಾಟಲು ನನಗೆ ಈ ಕಾರಣಕ್ಕಾಗಿ ಚೆನ್ನಾಗಿಯೇ ಅರ್ಥವಾಗುತ್ತದೆ.
ಇತರ ಘಟನೆಗಳು
ಒಂದು
ನಮ್ಮ ತಂದೆ ತಾಯಿಯವರು ಗೊಂಡಬಾಳಿನಲ್ಲಿ ಇದ್ದ ಕಾಲದಿಂದಲೂ ಚಿದಂಬರ ಭಕ್ತರಾಗಿದ್ದರು. ನಮ್ಮ ಮನೆಯಲ್ಲಿ ಚಿದಂಬರರ ಕುರಿತು ಸ್ತುತಿ, ಹಾಡುಗಳನ್ನು ಹಾಡುತ್ತಿದ್ದರು, ಹಾಡಿಸುತ್ತಿದ್ದರು. ಅಂತಹ ಒಂದು ಹಾಡು “ ಪ್ರಾರ್ಥಿಪೇ ಪ್ರಭೋ ..... “ ಎಂಬ ಹಾಡು. ಹಾಗಾಗಿ ನಮ್ಮ ಸಹಜ ಒಲವು ಅತ್ತ ಕಡೆ ಇತ್ತು. ಮಂಗಳೂರಿನ ಹತ್ತಿರವೇ ಇರುವ ಒಣಗೇರಿ ಎಂಬ ಊರಿನಲ್ಲಿ ಪ್ರತಿ ವರ್ಷವೂ ಚಿದಂಬರ ಜಯಂತಿ ಆಚರಿಸಲಾಗುತ್ತಿತ್ತು. ಯಥಾ ರೀತಿ ಅಪ್ಪನ ಮರಣದ ನಂತರ , ನಾವು ಅಂದರೆ ಅಕ್ಕ , ಅವ್ವ ಜಯಂತಿಯ ದಿನ ಒಣಗೇರಿಗೆ ಹೋಗುತ್ತಿದ್ದೆವು. ಆ ಊರು ನಮ್ಮ ಊರಿನಿಂದ ೭-೮ ಕಿ ಮೀ ದೂರವಿದೆ . ಅಲ್ಲಿಗೆ ಯಾವುದೇ ಬಸ್ಸಿನ ಸೌಕರ್ಯವಿರಲಿಲ್ಲ . ನಡೆದೇ ಅಂದಿನ ದಿನ ಬೆಳಗ್ಗೆ ನಾವು ಅಲ್ಲಿಗೆ ಹೋಗುತ್ತಿದ್ದೆವು. ಅದು ಒಂದು ಸಣ್ಣ ಹಳ್ಳಿಯಾದರೂ ಎಲ್ಲೆಲ್ಲಿಯಿಂದಲೋ ಬ್ರಾಹ್ಮಣರು ಸಾಗರದಂತೆ ಬಂದು ಸೇರುತ್ತಿದ್ದರು . ದೂರದ ಪೂನಾ, ಮುಂಬೈ ಮತ್ತಿತರ ದೊಡ್ಡ ದೊಡ್ಡ ಊರುಗಳಿಂದಲೂ ಅನೇಕ ಜನ ೨-೩ ದಿನ ಮೊದಲೇ ಬಂದು ಸೇರುತ್ತಿದ್ದರು. ಅಂತಹವರಿಗೆ ಅದು ಭಕ್ತಿ ಭಾವ ವ್ಯಕ್ತಪಡಿಸುವ ಮತ್ತು ಏಕತೆ , ಅಭಿಮಾನ ಪ್ರದರ್ಶಿಸುವ ಸಂದರ್ಭವಾಗಿತ್ತು. ಇಂದಿನ ಎಲ್ಲ ಉತ್ಸವಗಳಂತೆ , ಪೂಜೆ , ಹಾಡು ಇತರೆ ಆಚರಣೆಗಳು ಅಲ್ಲಿ ನಡೆಯುತ್ತಿದ್ದವು . ಸಣ್ಣವನಾದ ನಾನು ಅಲ್ಲಿ ಇಲ್ಲಿ ಓಡಾಡುವುದರಲ್ಲೇ ಕಾಲಕಳೆದು ಊಟದ ಹೊತ್ತಿಗೆ ಊಟದ ಸಾಲಿನಲ್ಲಿರುತ್ತಿದ್ದೆ. ಅಂತೂ ಸಾಯಂಕಾಲದ ಹೊತ್ತಿಗೆ ಮತ್ತೆ ನಡೆದು ಮಂಗಳೂರು ಸೇರುತ್ತಿದ್ದೆವು .
ಘಟನೆ ಎರಡು
ಮಂಗಳೂರಿನದ್ದಾಗ ೯-೧೦ನೇ ತರಗತಿಯ ಕಾಲಾವಧಿಯಲ್ಲಿ, ಅಪ್ಪ ಸತ್ತ ನಂತರ ನಾನು ಉಪನಯನದ ವಟುವಾಗಿ ಕಾವೇರಿಬಾಯಿಯ ಮನೆಯಲ್ಲಿ ದಸರೆ, ಗಣೇಶ ಹಾಗೂ ಇತರೆ ಹಬ್ಬಗಳಲ್ಲಿ ಅವರ ಮನೆಗೆ ಪೂಜೆಗೆ ಮತ್ತು ಊಟಕ್ಕೆ ಹೋಗುತ್ತಿದ್ದೆ. ನಮ್ಮ ಮನೆ ಒಂದು ಕೊನೆಯಾದರೆ ಅವರದು ಇನ್ನೊಂದು ಕೊನೆ. ಅಲ್ಲಿಯವರೆಗೂ ಕಚ್ಚೆ ಪಂಚೆ ಹಾಕಿಕೊಂಡು ಊರ ತುಂಬೆಲ್ಲ ನಡೆದುಕೊಂಡು ಹೋಗುವುದು ಮುಜುಗುರದ ಸಂಗತಿಯಾಗಿತ್ತು. ಆದರೂ ಪ್ರೀತಿಯಿಂದ ಹಾಕುತ್ತಿದ್ದ ಪುಷ್ಕಳ ಭೋಜನ ಮತ್ತು ಆದರೋಪಚಾರಕ್ಕಾಗಿ , ಒಂದು ರೂಪಾಯಿ ದಕ್ಷಿಣೆಗಾಗಿ ಅದನ್ನೆಲ್ಲ ನಾನು ಮಾಡಲೇಬೇಕಾಗಿತ್ತು. ಆಗ ನನ್ನ ತಲೆಯಲ್ಲಿ ಯಾವುದೇ ವಿಚಾರಗಳು ಇರದಿದ್ದ ಕಾರಣ ಮುಜುಗುರದ ಹೊರತಾಗಿ ಮತ್ಯಾವ ತೊಂದರೆಯೂ ಇರಲಿಲ್ಲ. ಅಂತೂ ಆ ಒಂದು ಅನುಭವ ನನ್ನ ಜೀವನಕ್ಕೆ ಸೇರಿತು.
ಘಟನೆ ಮೂರು
ಮಂಗಳೂರು ಗೊಂಡಬಾಳಿಗಿಂತ ದೊಡ್ಡ ಊರು. ಅಲ್ಲಿ ಬ್ರಾಹ್ಮಣರ ಮನೆಗಳೂ ಅನೇಕ . ಎಂದಿನಂತೆ ಲಿಂಗಾಯತರು ಅಧಿಕ. ಅಲ್ಲಿನ ಆಗಿನ ಶಾನುಭೋಗ ಶಂಕರಪ್ಪ - ಬ್ರಾಹ್ಮಣ . ಆತನ ವಿಶೇಷವೇ ಬೇರೊಂದಿದೆ. ಅದು ಈಗ ಅನಾವಶ್ಯಕ . ಸರಳವಾಗಿ ಒಂದು ಮಾತು . ಆತ ಗತ್ತು ಹಾಗೂ ಘನತೆಯಿಂದ ಶಾನುಭೋಗಿಕೆ ನಡೆಸುತ್ತಿದ್ದ. ಇತರರಿಗಿಂತ ತುಸು ವಿದ್ಯಾವಂತ. ತೋಟ , ಮನೆ ಆಸ್ತಿ ಇತ್ತು. ಆತನಿಗೆ ಮೊದಲು ಜಾತಿಯಲ್ಲೇ ಒಂದು ಮದುವೆಯಾಗಿತ್ತು. ಏನು ಕಾರಣವೂ ನಾ ತಿಳಿಯೆ , ಆತ ಆಕೆಯೊಂದಿಗೆ ಸಂಸಾರವನ್ನೇ ಮಾಡಲಿಲ್ಲ. ಅಂತಹ ಒಂದು ನೋವಿನ ಸಂದರ್ಭದಲ್ಲಿ ಆ ಹೆಂಡತಿ ನಮ್ಮ ಅಪ್ಪನಲ್ಲಿ ಭವಿಷ್ಯ ಕೇಳಲು ಬರುತ್ತಿದ್ದಳು. ಅವ್ವನೊಂದಿಗೆ ನೋವು ಹಂಚಿಕೊಳ್ಳುತ್ತಿದ್ದಳು. ಅಪ್ಪನೂ ಸಮಾಧಾನದ ಮಾತು ಹೇಳಿ ಕಲಿಸುತ್ತಿದ್ದ- ಜಾತಕ ಜ್ಯೋತಿಷ್ಯದ ಸಾಂತ್ವನದ ಮಾತುಗಳವು. ಕೆಲ ವರ್ಷಗಳ ನಂತರ ಆತನಿಗೂ ಲಿಂಗಾಯತ ಮಹಿಳೆಯ ಜೊತೆಗೆ ಸಂಬಂಧವೇರ್ಪಟ್ಟು ಮದುವೆಯೂ ಆಗಿ ಮಗನೂ ಜನಿಸಿದ. ಈ ಶಾನುಭೋಗ ಕಾಂಗ್ರೆಸ್ ಪಕ್ಷದ ಸದಸ್ಯ ಮತ್ತು ನೇತಾರನಾಗಿದ್ದ. ಮುಂದಿನ ಘಟನೆಗೆ ಇದು ಮುಖ್ಯ ನೆನಪಿನಲ್ಲಿಟ್ಟುಕೊಳ್ಳಿ .
ಘಟನೆ ನಾಲ್ಕು
ಮಂಗಳೂರಿನಲ್ಲಿ ಎಲ್ಲ ಜಾತಿ ಜನಾಂಗಗಳಿದ್ದರೂ ಒಂದು ಮುಖ್ಯ ವ್ಯತ್ಯಾಸವನ್ನು ತಿಳಿಯಬೇಕು. ಅಲ್ಲಿ ಲಿಂಗಾಯತರೂ, ಇತರೆ ಓ ಬಿ ಸಿ ಗುಂಪಿಗೆ ಸೇರಿದ ಜನರಿದ್ದರು. ಬ್ರಾಹ್ಮಣರ ಮನೆಗಳೂ ೧೦-೧೫ ಇದ್ದವು. ಬ್ರಾಹ್ಮಣ ಶಂಕರಪ್ಪ ಊರಿನ ಶಾನುಭೋಗ ಮತ್ತು ಕಾಂಗ್ರೆಸ್ ನೇತಾರ. ಮಂಗಳೂರಿನಲ್ಲಿ ‘ಮುಚ್ಚಿಗೇರರು’ ಎಂದು ಕರೆಯಲ್ಪಡುತ್ತಿದ್ದ ಅಸ್ಪೃಶ್ಯ ಜಾತಿಯವರೂ ಸಾಕಷ್ಟು ಇದ್ದರು. ಮುಚ್ಚಿಗೇರರೆಂದರೆ - ದಲಿತರು - ಹೊಲೆಯರೋ , ಮಾದಿಗರೋ ನನಗೆ ತಿಳಿಯದು. ಅವರು ಸಾಕಷ್ಟು ಸಂಖ್ಯೆಯಲ್ಲಿದ್ದರು. ಅಷ್ಟೇ ಅಲ್ಲ ಕಟ್ಟಿಗೆ ಕೊರೆಯುವ - ಸಾ ಮಿಲ್ ಇಟ್ಟುಕೊಂಡು ಆರ್ಥಿಕವಾಗಿಯೂ ಸಬಲರಾಗಿದ್ದರು. ಹೇಗೋ ಏನೋ ನನಗೆ ತಿಳಿಯದು , ಆಧುನಿಕ ವಿಚಾರಗಳೂ - ಅಂದರೆ ಸಮಾನತೆ ಬಯಸುವುದು , ದೇವಸ್ಥಾನ ಪ್ರವೇಶ, ನೀರಿನ ಬಾವಿಗೆ ಪ್ರವೇಶ ಇತ್ಯಾದಿಗಳಿಗೆ ಅವರು ಬೇಡಿಕೆ ಇಡುತ್ತಿದ್ದರು. ಅದರಿಂದ , ಅವರ ಆರ್ಥಿಕ ಶಕ್ತಿಯಿಂದಾಗಿಯೂ ಊರಿನ ಇತರೆ ಬಲಾಢ್ಯ ಜಾತಿಗಳೊಂದಿಗೆ ತಿಕ್ಕಾಟವಿತ್ತು. ಇಂತಹ ವಿಚಾರಗಳಲ್ಲಿ ಹೆಚ್ಚಾಗಿ ಊರಿನ ಇತರೆ ಜಾತಿಗಳ ಪ್ರತಿನಿಧಿಯಾಗಿದ್ದ ಮತ್ತು ಕಾಂಗ್ರೆಸ್ ನೇತಾರನಾಗಿದ್ದ ಶಂಕರಪ್ಪನಿಗೆ ಪೀಕಲಾಟಕ್ಕಿಟ್ಟುಕೊಳ್ಳುತ್ತಿತ್ತು. ಅಂತೂ ಕೊನೆಗೆ ಊರಿನಲ್ಲಿ ಕೆಟ್ಟ ಪರಿಸ್ಥಿತಿ ಏರ್ಪಟ್ಟಿತು . ಯಾವುದೋ ನೆಪದಲ್ಲಿ ದಲಿತರಿಗೂ, ಸವರ್ಣೀಯರಿಗೂ ಸಂತೇ ಪೇಟೆಯಲ್ಲಿ ಘರ್ಷಣೆ , ಹೊಡೆದಾಟವೇ ನಡೆಯಿತು. ಮೂಢ ಜನ , ಜಾತಿಯ ಕಾರಣದಿಂದಾಗಿ ಎತ್ತಿನ ಗಾಡಿಯ ಗಳುಗಳು , ಬಡಿಗೆ ಇತ್ಯಾದಿ ಆಯುಧಗಳಿಂದ ಮುಚ್ಚಿಗೇರರ ಮೇಲೆ ಮುಗಿ ಬಿದ್ದರು. ಪಕ್ಷದ ಒತ್ತಾಯದಿಂದಾಗಿಯೋ , ಪರಿಸ್ಥಿತಿಯ ಒತ್ತಡದಿಂದಾಗಿಯೋ ಕಾಂಗ್ರೆಸ್ ನೇತಾರ ಶಾನುಭೋಗ ಶಂಕರಪ್ಪ ತಟಸ್ಥನಾಗಿ ಹಿನ್ನೆಲೆಗೆ ಸರಿದ. ಈ ಬೆಳವಣಿಗೆಯಿಂದಾಗಿ ಊರಿನ ಜನ ಶಂಕರಪ್ಪನ ಜಾತಿ ಬದ್ಧತೆಯನ್ನು ಟೀಕಿಸಿದರು. ಅವನು ದ್ರೋಹಿ ಎಂಬಂತೆ ಚಿತ್ರಿಸಿದರು. ಆದರೆ ಇದಕ್ಕೆ ವ್ಯತಿರಕ್ತವಾಗಿ ಇನ್ನೊಬ್ಬ ಲಿಂಗಾಯತ ವ್ಯಕ್ತಿ ಯಾವ ಕಾರಣಕ್ಕಾಗೋ ನನಗೆ ತಿಳಿಯದು ದಲಿತರನ್ನು ಮುಕ್ತವಾಗಿ ಬೆಂಬಲಿಸಿ ಊರಿನ ಜನರಿಂದಲೂ , ಜಾತಿ, ಬಂದುಗಳಿಂದಲೂ ಸಾಮಾಜಿಕ ಬಹಿಷ್ಕಾರಕ್ಕೊಳಗಾದ. ಇಂದಿಗೂ ಆತನ ನಡೆ ನನಗೆ ನಿಗೂಢವಾಗುಳಿದರೂ , ಆತನ ಬದ್ಧತೆ ಮತ್ತು ಧಾರ್ಷ್ಠ್ಯತೆಯನ್ನು ಯೋಚಿಸಿದಾಗ ಆತನಿಗೆ ಶರಣು ಎಂದು ಹೇಳಬೇಕೆನಿಸುತ್ತೆ. ಆತ ಯಾರು , ಯಾಕೆ ಹಾಗೆ ದೃಢವಾಗಿ ದಲಿತ ಪರವಾಗಿ ನಿಂತಿದ್ದ ಎಂಬುದೂ ಈಗಲೂ ನನಗೆ ಅರ್ಥವಾಗದಾಗಿದೆ .
ಇದರ ಮುಂದಿನ ಹಂತವಾಗಿ , ಅತ್ಯಂತ ಧೃಢವಾಗಿ ನಿಂತಿದ್ದ ದಲಿತರು, ಆಗಿನ ರಾಜಕೀಯ ಕಾರಣಕ್ಕಾಗಿಯೂ - ಅಂದರೆ ದಲಿತಪರ ಕಾಂಗ್ರೆಸ್ ನೀತಿಯಿಂದಾಗಿ , ನಾವು ದೇವಸ್ಥಾನ ಪ್ರವೇಶಿಸೆಯೇ ತೀರುತ್ತೇವೆ ಎಂದು ಅತ್ಯಂತ ದೃಢವಾಗಿ ನಿಂತಿದ್ದರು. ಈಗಲೂ ಆಗಿನ ಘಟನೆಯ ಬಗೆಗೆ ತಿಳಿಯಬೇಕೆಂಬ ಕುತೂಹಲ ಉತ್ಕಟವಾಗುತ್ತಿದೆ . ಅದು ಎಲ್ಲಿಯಾದರೂ ದಲಿತ ಹೋರಾಟದ ಇತಿಹಾಸದಲ್ಲಿ ದಾಖಲಾಗಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಖಂಡಿತವಾಗಿಯೂ ಅದು ದಾಖಲಾಗಲೇಬೇಕಾದ ಸಂಗತಿಯೇ . ಮುಂದಿನ ಹೋರಾಟ ಹೇಗೆ ಅಂತಿಮ ರೂಪ ಪಡೆಯಿತೋ ನನಗೆ ತಿಳಿದಿಲ್ಲ. ಅಂತೂ ಒಂದು ದಿನ ಜಿಲ್ಲಾ ಎಸ್ ಪಿ ಸಮೇತ ಒಂದು ದೊಡ್ಡ ಪೊಲೀಸ್ ಪಡೆ ಬಂದೂಕು, ವ್ಯಾನುಗಳೊಂದಿಗೆ ಮಂಗಳೂರಿಗೆ ಬಂದೇ ಬಂತು. ಬಹುಸಂಖ್ಯಾತ ಜನಕ್ಕೆ ಇಷ್ಟವಿರಲಿಲ್ಲ ; ಅವರಲ್ಲಿ ಅಸಹನೆ ಅಸಮಾಧಾನ ಮನೆಮಾಡಿತ್ತು. ಕಾನೂನಿಗಿಂತಲೂ ಅವರು ಪೊಲೀಸ್ ಪಡೆಗೆ ಅವರು ಹೆದರಿದ್ದರು. ಏನು ಮಾಡಬೇಕೆಂದು ತಿಳಿಯದೆ ಅಸಹಾಯಕರಾಗಿದ್ದರು.
ಒಂದು ದಿನ ನೋಡ ನೋಡುತ್ತಿದ್ದಂತೆ ಪೊಲೀಸ್ ರಕ್ಷಣೆಯೊಂದಿಗೆ ನಾವು ವಾಸವಿದ್ದ ಉಪ್ಪಾರ ಓಣಿಯ ಬಾವಿಯ ಹತ್ತಿರ ಒಂದಿಷ್ಟು ಜನ ಅಂದರೆ ಮುಚ್ಚಿಗೇರರ ಮುಖಂಡರಿರಬಹುದು ಹಗ್ಗ , ಕೊಡಗಳ ಸಮೇತ ಬಂದರು. ನನ್ನನ್ನೂ ಸೇರಿದಂತೆ ಸವರ್ಣೀಯ ಜನ ದೂರ ನಿಂತು ನಡೆಯಬಹುದಾದ, ಇಷ್ಟವಿರದ ಘಟನೆಯನ್ನು ಕುತೂಹಲದಿಂದ ನೋಡುತ್ತಿದ್ದರು. ಒಂದಿಷ್ಟು ಜನ ದಲಿತ ಮುಖಂಡರು ಕೊಡಕ್ಕೆ ಹಗ್ಗ ಕಟ್ಟಿ ಬಾವಿಗೆ ಇಳಿಬಿಟ್ಟರು. ನೀರು ಸೇದಿದರು. ಗುರಿ ಸಾಧಿಸಿದರು. ಅವರಿಗೆ ಬೇಕಾದ್ದನ್ನು ಪಡೆದರು. ಬಂದಷ್ಟೇ ವೇಗದಲ್ಲಿ ಮುಂದಿನ ಬಾವಿಗೆ ತೆರಳಿದರು. ಮುಂದಿನ ಅನೇಕ ವರ್ಷಗಳ ಕಾಲ ಸವರ್ಣೀಯರು ಆ ಬಾವಿಯ ನೀರನ್ನು ಬಳಸಲಿಲ್ಲ. ಈಗ ಹೇಗೋ ನನಗೆ ತಿಳಿಯದು . ಕೊನೆಗೆ ಅವರು ಊರಿನ ಮುಖ್ಯ ಗುಡಿಯಾಗಿದ್ದ ಮಂಗಳೇಶನ ಗುಡಿಯನ್ನೂ ಪ್ರವೇಶಿಸಿದರು! ಆಗ ನನ್ನನ್ನೂ ಸೇರಿದಂತೆ ಊರಿನ ಸವರ್ಣೀಯ ಜನಕ್ಕೆ ಬೇಸರವಾಗಿದ್ದರೂ ಈಗ ನನಗೆ ನಮ್ಮ ಊರಿನ ದಲಿತ ಜನರ ಸಾಧನೆಗೆ ಹೆಮ್ಮೆಯೆನಿಸುತ್ತದೆ.
ಮುಂದಿನ ದಿನಗಳಲ್ಲಿ ಊರಿನಲ್ಲಿ ಶಂಕರಪ್ಪ ಅನಾದರ ,ಅಗೌರವಗಳಿಗೆ ಎರವಾದ. ದಲಿತರನ್ನು ಯಾವ ಕಾರಣಕ್ಕೋ ಬೆಂಬಲಿಸಿದ್ದ ಆ ಲಿಂಗಾಯತ ವ್ಯಕ್ತಿ ಊರಿನ ಜನರಿಂದಲೂ, ಜಾತಿಯ ಜನರಿಂದಲೂ , ಕಡೆಗೆ ಕುಟುಂಬದವರಿಂದಲೂ ಬಹಿಷ್ಕೃತನಾಗಿ ಕೆಲ ಕಾಲ ಊರಿನ ಜನರ ಹಲ್ಲೆಯ ಭಯದಿಂದ ತಲೆಮರೆಸಿಕೊಂಡಿದ್ದ. ಹೀಗಿತ್ತು ಆ ಘಟನೆ . ಇದು ನಡೆದಿದ್ದು ೧೯೭೪ರಲ್ಲಿರಬಹುದು. ಅಂದಿನ ಇಂತಹ ಸಾಧನೆಗೆ ಅದೆಷ್ಟು ತಯಾರಿ ನಡೆದಿತ್ತೋ ! ಇದರ ಸಾಧನೆಗೆ ಕಾರಣರಾದ ಎಲ್ಲರಿಗೂ ವಿಶೇಷವಾಗಿ ಮುಚ್ಚಿಗೇರ ಜನರ ಧೀಮಂತ ನಾಯಕರಿಗೂ, ಆ ಅನಾಮಧೇಯ ಲಿಂಗಾಯತ ವ್ಯಕ್ತಿಗೂ ನನ್ನದೊಂದು ನಮನ.
ಒಟ್ಟಾರೆ ಹೀಗೆ ಮಂಗಳೂರಿನಲ್ಲಿ ನನ್ನ ಮೂರು ವರ್ಷದ ಜೀವನ ಹಾಗೂ ವಿದ್ಯಾಭಾಸ ನಾನಾ ಭಾವನೆ, ತಾಪತ್ರಯ ಮತ್ತು ವೈವಿಧ್ಯಮಯ ಅನುಭವಗಳೊಂದಿಗೆ ಮುಗಿಯಿತು.
ಭಾಗ -೩ ಚಿತ್ರದುರ್ಗದತ್ತ ಪಯಣ
ಭಾಗ -೪ ಮಾಸ್ಕೋ ಯಾತ್ರೆ
ಭಾಗ -೫ ವೃತ್ತಿಜೀವನ
------------------------------------------------------------------------------------------
೧೯೭೧ ರ ಪಾಕಿಸ್ತಾನದ ಯುದ್ಧದ ನಂತರ ದೇಶದ ಹಸಿವಿನ ಸ್ಥಿತಿಯೂ ಎಲ್ಲರಿಗೂ ತಟ್ಟಿತ್ತು. ನಮಗೆ ಗೊಂಡಬಾಳಿನಂತೆ ಜಮೀನಿನ ಆದಾಯವೂ ಇರಲಿಲ್ಲ , ಅಪ್ಪ ಹಾಸಿಗೆ ಹಿಡಿದಿದ್ದ . ಒಂದೇ ವ್ಯತ್ಯಾಸವೆಂದರೆ ಇರಲು ಮನೆ ಹಾಗೂ ನನ್ನ ವಿದ್ಯಾಭ್ಯಾಸಕ್ಕೆ ಒಂದು ದಾರಿ ಸಿಕ್ಕಿತ್ತು. ಆಗ ಅಣ್ಣಂದಿರು ಕಳಿಸುತ್ತಿದ್ದ ೪೦-೫೦ ರೂಪಾಯಿಗಳಲ್ಲೇ ನಾಲ್ಕು ಜನರ ಜೀವನ ಸಾಗಬೇಕಾಗಿತ್ತು. ಮನೆಯಲ್ಲಿದ್ದ ಒಬ್ಬನೇ ಗಂಡುಮಗನಾದ ನಾನು ಆಗಿನಿಂದಲೇ ಮನೆ ಸಾಮಾನು ತರುವ ಮತ್ತು ಇತರೆ ಕೆಲಸ ಮಾಡಲು ಕಲಿಯತೊಡಗಿದೆ. ನನ್ನ ಓದು ಯಾವುದೇ ತೊಂದರೆಯೂ ಇಲ್ಲದೆ , ಸಾಧನೆಯೂ ಇಲ್ಲದೆ ಸರಾಗವಾಗಿ ಹರಿಯುವ ನದಿಯಂತೆ ನಡೆಯುತ್ತಿತ್ತು. ಅಆರ್ಥಿಕ ಹೊಡೆತದಿಂದ ಪಾರಾಗಲು ಅವ್ವ , ಅಕ್ಕ ಸಾಹಸಪಡುತ್ತಿದ್ದರು .
ಅನೇಕ ಉತ್ತರ ಕರ್ನಾಟಕದ ಹಳ್ಳಿಗಳಂತೆ ನಮ್ಮ ಊರಿನಲ್ಲೂ ನೀರಿಗೆ ತತ್ವಾರವಿತ್ತು. ಅದರಲ್ಲೂ ಕುಡಿಯುವ ನೀರಿಗಂತೂ ಹಳ್ಳಗಳ ಒರತೆಗಳನ್ನೇ ಆಶ್ರಯಿಸಬೇಕಾಗಿತ್ತು. ಊರಿನ ಹತ್ತಿರವಿದ್ದ ಒಣಗೇರಿ ಹಳ್ಳದಲ್ಲಿ ಒಂದು ಒರಟೆ ತೋಡಿ ಇಷ್ಟಿಷ್ಟೇ ಬರುತ್ತಿದ್ದ ನೀರನ್ನು ಬಟ್ಟಲಿನಿಂದ ತುಂಬಿ ಕೊಡಕ್ಕೆ ಹಾಕಬೇಕಾಗಿತ್ತು.
ನಾನಾಗ ೯ನೇ ತರಗತಿಯಲ್ಲಿದ್ದೆ. ಅಣ್ಣಂದಿರು ಅವರ ಆದಾಯದ ಕೊರತೆಯಿಂದಾಗಿ ಒಂದೊಂದು ಸಲ ಹಣ ಕಳಿಸುವುದು ತಡವಾಗುತ್ತಿತ್ತು- ಅದೂ ಆಗ ಇದ್ದುದು ಗ್ರೇಟ್ ಬ್ರಿಟಿಷ್ ಸಾಧನವಾದ ಎಂ ಓ ಮೂಲಕ ! ಕಾರಾಣಿ ಸಾಮಾನು ಉದ್ರಿ ಕೊಟ್ಟಿರುತ್ತಿದ್ದ ಅಂಗಡಿಯವನ ವರಾತ ಜೆಕೋರಾಗಿರಿತ್ತಿತ್ತು. ಅಂತಹ ಸಂದರ್ಭದಲ್ಲಿ ನಾನು ಓದಲು ಹೋಗುತ್ತಿದ್ದ ಪಾಟೀಲ್ ಮಾಸ್ತರರ ಕಟ್ಟೆ ಸೇರಲು , ಎಂದಿನಂತೆ ಆ ಅಂಗಡಿಯ ದಾರಿಯ ಮೂಲಕ ಹೋಗದೆ ಬೇರೆಯದೇ ದಾರಿ ಹುಡುಕಬೇಕುತ್ತಿತ್ತು. ಅಂತೂ ಕಳ್ಳನಂತೆ ಯಾವುದೋ ಸಂದಿಯ ದಾರಿಯ ಹಿಡಿದು ಓದುವ ಕಟ್ಟೆ ಸೇರುತ್ತಿದ್ದೆ .
ಅಂದಿನ ಪರಿಸ್ಥಿತಿ ತುಂಬಾ ಕಷ್ಟದಾಯಕವಾಗಿತ್ತು. ಊಟಕ್ಕೂ ತತ್ವಾರದ ಪರಿಸ್ಥಿತಿಯಿಯಿತ್ತು. ಇಂತಹ ಒಂದು ಸಂದರ್ಭದಲ್ಲಿ ಆಗ ನಮ್ಮ ಊರಿನ ಸರಕಾರೀ ಆಸ್ಪತ್ರೆಗೆ ಒಬ್ಬ ಬ್ರಾಹ್ಮಣ ಡಾಕ್ಟ್ರರು ಬಂದರು. ಅವರಿಗೂ ನೀರಿನ ಸಮಸ್ಯೆ ತಟ್ಟಿತು. ಅವರ ಮನೆಗೆ ನೀರು ತರಲು ಒಬ್ಬರ ಅವಶ್ಯಕತೆ ಉಂಟಾಯಿತು. ಅದು ಹೇಗೋ ನಾಮ್ಮ ಅವ್ವನಿಗೆ ತಿಳಿದು ನನ್ನನ್ನು ಆ ಕೆಲಸಕ್ಕೆ ನೇಮಿಸಿ ಮನೆಗೆ ತಿಂಗಳಿಗೆ ೧೦-೧೫ ರೂಪಾಯಿ ಪಡೆಯುವಂತಾಯಿತು. ಇಲ್ಲಿ ಒಂದು ವಿಷಯ ಹೇಳಬೇಕು. ಆ ಡಾಕ್ಟರರು ಬಾಡಿಗೆಗೆ ಇದ್ದುದು ನಮ್ಮ ಸೋದರತ್ತೆಯ ಮನೆಯಾಗಿತ್ತು. ನಮ್ಮ ಸೋದರತ್ತೆಯ ಜೊತೆಗೆ ನಮ್ಮ ಕುಟುಂಬದ ಸಂಬಂಧ ಸರಿಯಿರಲಿಲ್ಲ. ಸ್ವಂತ ಅಣ್ಣನ ಮಗನಾಗಿದ್ದರೂ ನಾವು ಇದ್ದಷ್ಟು ದಿನ ನಮ್ಮ ಸೋದರತ್ತೆ ಒಂದು ದಿನವೂ ಮಾತನಾಡಿಸಲಿಲ್ಲ. ನಾನೂ ಸಹ ಆ ಸಾಹಸಕ್ಕಿಳಿಯಲಿಲ್ಲ. ಅತ್ತೆ ಅಲ್ಲಿ ವಾಸವಿರದಿದ್ದರೂ ಡಾಕ್ಟರರು ಬಾಡಿಗೆಗಿದ್ದ ಮನೆಯಾದ್ದರಿಂದ ನಾನು ಆ ಮನೆಗೆ ಹೋಗಬೇಕಾಯಿತು. ಆದರೆ ದುರದೃಷ್ಟವಶಾತ್ ನನ್ನ ಸೇವೆ ೨-೩ ತಿಂಗಳೂ ನಡೆಯಲಿಲ್ಲ.
ಪಾಟೀಲ ಮಾಸ್ತರರ ಕಟ್ಟೆ
ನಿರಾಯಾಸವಾಗಿ ೮ನೇ ತರಗತಿ ಪಾಸಾಗಿ ೯ನೇ ತರಗತಿಗೆ ಕಾಲಿಟ್ಟಿದ್ದೆ. ಆಗ ನನ್ನ ಸಹಪಾಠಿ ಅದಿವೇಲ್ಪ್ಪ ಉಪ್ಪಾರ . ಇಬ್ಬರ ಸ್ನೇಹವೂ ಆತ್ಮೀಯವೂ ಪರಸ್ಪರ ಪೂರಕವೂ ಆಗಿತ್ತು. ಅವನೂ ನನ್ನ ಜೊತೆ ರಾತ್ರಿ ಓದಲು ಮಟ್ತಳು ಅಲ್ಲಿಯೇ ಮಲಗಲು ಪಾಟೀಲ ಮಾಸ್ತರರ ಮನೆ ಸೇರಿದ. ಶಾಲೆ , ಮನೆ ,ಮನೆ ಕೆಲಸ ಹಾಗೂ ಓದು ಇದು ನನ್ನ ಜೀವನವಾಯಿತು. ರಾತ್ರಿ ೬ ಗಂಟೆಯಿಂದ ಬೆಳಗಿನ ೭ ಗಂಟೆಯವರೆಗೆ ನಾವು ಆ ಕಟ್ಟೆಯ ಮೇಲಿರುತ್ತಿದ್ದೆವು . ಅಲ್ಲಿಯೇ ನಮ್ಮ ಹಾಸಿಗೆ ಮತ್ತು ಪುಸ್ತಕಗಳಿರುತ್ತಿದ್ದವು.
ಹೀಗಿರುವಾಗ ಮನೆಯ ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತ ಸಾಗಿತ್ತು. ಟಿ ಬಿ ಕಾಯಿಲೆಯಿಂದ ಅಪ್ಪನ ನರಳಾಟವೂ ಇಮ್ಮಡಿಸುತ್ತಿತ್ತು. ಆರ್ಥಿಕ ಪರಿಸ್ಥಿಯ ಭಾವನೆ, ಭವಿಷ್ಯದ ಚಿಂತೆ ಬೆಂಬಿಡದೆ ಅವ್ವ, ಅಕ್ಕ ಮತ್ತು ನನ್ನನ್ನು ಕಾಡುತ್ತಿತ್ತು. ೧೯೭೩ರ ದಸರೆಯ ಎರಡನೇ ದಿನ ಅಪ್ಪ ಮರಣ ಹೊಂದಿದರು. ಎಂದಿನಂತೆ ಮುಂದಿನ ಎಲ್ಲ ಕಾರ್ಯಗಳಿಗೆ ಅಕ್ಕ ಅಣ್ಣಂದಿರು ಬಂದು ಸೇರಿದರು. ಅಂತಿಮ ಶವ ಸಂಸ್ಕಾರಕ್ಕೆ ಚಿಕ್ಕವನೆಂದು ನನ್ನನ್ನು ಕರೆದುಕೊಂಡು ಹೋಗಲಿಲ್ಲ . ನಮ್ಮೂರ ಹತ್ತಿರವೇ ಇರುವ ಹಳ್ಳದ ದಂಡೆಯಲ್ಲಿ ಸಂಸ್ಕಾರವಾದಂತೆ ನೆನಪು. ಸಂಸ್ಕಾರ ಕ್ರಿಯೆಗಳೆಲ್ಲ ಮುಗಿದ ನಂತರ ಎಲ್ಲರೂ ಅವರವರ ಊರಿಗೆ ಮರಳಿದರು. ದೊಡ್ಡ ಅಣ್ಣನು ತನ್ನ ಬವಣೆಯ ಕಾರಣಕ್ಕಾಗಿ ಹಿಂಡತಿಯನ್ನು ನಮ್ಮೊಡನೆ ಬಿಟ್ಟು ತಾನು ಮಾತ್ರ ಮರಳಿದ . ಕೆಳವಳು ವಾರಗಳ ನಂತರ ಅವರೂ ತಮ್ಮ ತವರು ಮನೆಗೆ ವಾಪಸಾದರು.
ಅಪ್ಪನ ಮರಣದ ನಂತರ ನಾವು ಮೂವರು ಅವ್ವ, ಅಕ್ಕ ಮತ್ತು ನಾನು ಆತ್ರ ಊರಿನಲ್ಲುಳಿದೆವು. ಇಬ್ಬರು ಅಣ್ಣಂದಿರು ಚಿತ್ರದುರ್ಗದಲ್ಲೂ , ಇನ್ನಿಬ್ಬರು ಪೂನದಲ್ಲೂ ಇದ್ದು ಜೀವನ ಸಾಗಿಸುತ್ತಿದ್ದರು. ಅವರದೂ ಪರಿಸ್ಥಿತಿ ಶೋಚನೀಯವಾದಂತಿತ್ತು. ನನಗೆ ಅದರ ವಿವರ ಹೆಚ್ಚು ತಿಳಿಯದು.
ಈ ಹೊತ್ತಿಗೆ ಪಾಟೀಲ ಮಾಸ್ತರರ ಮನೆ ಕಟ್ಟೆಗೆ ಓದಲು ಇನ್ನೊಬ್ಬ ಸಹಪಾಠಿ ತಿಮ್ಮಣ್ಣ - ತಿಮ್ಮ ಅಂದರೆ ತಿರುಮಲ ದೇಶಪಾಂಡೆ ಬಂದು ಸೇರಿದ. ಅವನು ನಮ್ಮಿಬ್ಬರಂತಲ್ಲ - ಸ್ಥಿತಲಿವಂತ ಮತ್ತು ನಾನಾ ಶೋಕಿಗಳಿದ್ದವ ! ಸಹವಾಸದಿಂದ ಸನ್ಯಾಸಿ ಕೆಟ್ಟ ಎನ್ನುವ ಹಾಗೆ , ಅವನಿಂದ ನಾನು “ ಕುಣಿಬಿಲ್ಲೆ” ಆಟದ ವ್ಯಸನಕ್ಕೊಳಗಾದೆ.
ಕುಣಿಬಿಲ್ಲೆ ಆಟ
ಬರದ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಜೆಕೂಜುಕೋರರಿಗೂ, ಶೋಕೀವಾಲಾಗಳಿಗೂ ಹಾಗು ಮಧ್ಯವ್ಯಸನಿಗಿಳಿಗೂ ಬರವಿಲ್ಲ ! ಇಂತಹ ಒಂದು ಸಾಂದರ್ಭದಲ್ಲಿ ನಾನು ತಿಮ್ಮಣ್ಣನಿಂದ ಕುಣಿಬಿಲ್ಲೆ ಆತ ಆಡಲು ಕಲಿತೆ. ಕುಣಿಬಿಲ್ಲೆ ಆಟ ಎಂದರೆ ಒಂದು ಜಾಗದಿಂದ ೮-೧೦ ಅಡಿ ದೂರದಲ್ಲಿ ಒಂದು ೩-೪ ಅಂಗುಲ ಗುಂಡಿ ತೋಡಿ , ಆಟ ಆಡಲು ಬಯಸುವ ಎಲ್ಲರಿಂದ ಸಮನಾಗಿ ಸಂಗ್ರಹಿಸಿದ ನಾಣ್ಯಗಳನ್ನು ಹಿಡಿದು ಕುಣಿಯಿಂದ ೮-೧೦ ಅಡಿ ದೂರದ ಗೆರೆಯಿಂದ ಕುಣಿಯತ್ತ ನಾಣ್ಯಗಳನ್ನು ತೂರಬೇಕು . ಕುಣಿಯಲ್ಲಿ ಬಿದ್ದ ನಾಣ್ಯಗಳು ಅವನವು . ನಂತರ ಇನ್ನಷ್ಟು ಗೆಲ್ಲಬೇಕಾದರೆ ಮುಂದಿನ ಆಟಗಾರ ತೋರಿಸುವ ನಾಣ್ಯವನ್ನು ಬಚ್ಚ ಎಂದು ಕರೆಯುವ ಕಲ್ಲಿನಿಂದ ಬೇರೆ ನಾಣ್ಯಗಳಿಗೆ ತಾಕದಂತೆ ಹೊಡೆಯಬೇಕು. ಅದೊಂದೇ ನಾಣ್ಯಕ್ಕೆ ತಾಕಿದರೆ ಎಲ್ಲ ಹಣವೂ ನಿಮ್ಮದು , ಬೇರೆ ನಾಣ್ಯಗಳಿಗೆ ತಾಕಿದರೆ ದಂಡ ಕಟ್ಟಬೇಕು . ಇದು ಆಟದ ಸರಳ ವಿವರಣೆ. ಈ ಆಟಕ್ಕೆ ಕುಶಲತೆ, ಅನುಭವ ಹಾಗೂ ಎಲ್ಲ ಜೂಜುಗಳಂತೆ ಅದೃಷ್ಟ ಬೇಕು. ಅದಾವುದೂ ನನ್ನಲ್ಲಿರಲಿಲ್ಲ. ಹಾಗಾಗಿ ದಿನನಿತ್ಯವೂ ನಾನು ಹಣ ಸೋಇಳುತ್ತಿದ್ದೆ.
ಈ ವಿಷಯ ಹೇಗೋ ನನ್ನ ಮನೆಗೆ ತಲುಪಿತು. ಮನೆಯಲ್ಲಿ ರಣ ರಂಪವಾಯಿತು. ಮಗ ಸಹವಾಸದಿಂದ ಜೂಜಿನ ವ್ಯಸನಕ್ಕೆ ಒಳಗಾದ ಎಂದು ಅವ್ವನಿಗೆ ಭಯವಾಯಿತು. ಆತಂಕವೂ ಮನೆ ಮಾಡಿತು. ಆಗಿನ ಕಾಲಕೇ ೧-೨ ರೂಪಾಯಿಗಳೂ ನಮಗೆ ಭಾರೀ ದೊಡ್ಡ ಮೊತ್ತವಾಗಿತ್ತು. ಇಡೀ ತಿಂಗಳು ನಾವು ೪೦-೫೦ ರೂಪಾಯಿಗಳಲ್ಲಿ ಬದುಕುತ್ತಿದ್ದೆವಲ್ಲ ! ಅದಾಗಲೇ ಅಪ್ಪ ತೀರಿಕೊಂಡಿದ್ದ . ಅವ್ವ ಆಗ ಈ ಮೊದಲು ನನ್ನನ್ನು ಶಾಲೆಗೆ ಸೇರಿಸಲು ಜೊತೆಗೆ ಬಂದಿದ್ದ ಅದೇ ಆರ್ ಎಂ ಪಿ ಡಾಕ್ಟರರಿಂದಲೂ, ಅಡಿವೆಪ್ಪನಿಂದಲೂ ನನಗೆ ಬುದ್ಧಿ ಹೇಳಿಸಿ ಕುಣಿಬಿಲ್ಲೆಯ ವ್ಯಸನದಿಂದ್ ನನ್ನನ್ನು ದೂರ ಮಾಡಿದಳು . ಅದರಿಂದ ಜೀವನ ಪಾಠ ಕಲಿತ ನಾನು ಇಡೀ ಜೀವನದಲ್ಲಿ ಮುಂದೆಂದೂ ಯಾವ ಜೂಜಿಗೂ, ವ್ಯಸನಕ್ಕೂ ಒಳಗಾಗಲಿಲ್ಲ. ಆದ್ದರಿಂದ ಇಂದಿಗೂ ನನಗೆ ಟೈಂ ಪಾಸಿಗಾಗಿಯಾದರೂ ಇಸ್ಪೀಟ್ ಆಟ ಆಡಲು ಬರದಂತಾದ ಗಂವಾರನಾದೆ .
ಎಸ್ ಎಸ್ ಎಲ್ ಸಿ
ಇಂತಹ ಅನೇಕ ಬೆಳವಣಿಗೆಗಳ ನಡುವೆ ೧೯೭೪ರಲ್ಲಿ ನಾನು ೧೦ನೇ ತರಗತಿಗೆ ಸೇರಿದ್ದೇ. ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶಗಳಂತೆ , ಶಾಲೆಯ ವಾತಾವರಣವೂ, ಮನೆಯವಾತಾವರಣವೂ ಅಷ್ಟೇನೂ ಉತ್ತೇಜಕವಾಗಿರಲಿಲ್ಲ. ಹೀಗಿದ್ದರೂ ನಾನೂ ಅಡಿವೆಪ್ಪನೂ ತುಂಬಾಪರಿಶ್ರಮಪಡುತ್ತಿದ್ದೆವು.ಆಗ ನಮಗೆ ಇಂಗ್ಲೀಷಿನ ಭಯ ಈಗಿನಕರೋನಾಭಯಕ್ಕಿಂತಲೂಹಿರಿದಾಗಿತ್ತು. ಬಾಯಿ ಪಾಠ ಮಾಡಿದ ಉತ್ತರಗಳು , ವಾಕ್ಯಗಳು ಮತ್ತು ಓದಿದ ಕೆಲ ಪದಗಳ ಹೊರತಾಗಿ ನಮಗೆ ಬೇರೇನೂ ಬರುತ್ತಿರಲಿಲ್ಲ. ಆದರೂ ಬೇರೆಯ ಸಹಪಾಠಿಗಳಿಗೆ ಹೋಲಿಸಿದರೆ ನಾವೇ ಮೇಲಾಗಿದ್ದೆವು! ಕನ್ನಡ ಪಾಠ ಮಾಡಲು ಹುಲಿ ಮಾಸ್ತರರೂ , ವಿಜ್ಞಾನ ಹಾಗೂ ಇಂಗ್ಲಿಷ್ ಪಾಠಮಾಡಲು ಕಟ್ಟಿಮಾಸ್ತರರೂ ಇದ್ದರು. ಉಳಿದವರ ನೆನಪು ಬಾರದು.
ತಾಲೂಕು ಕೇಂದ್ರವಾದ ಯಲಬುರ್ಗಾ - ಇದು ಮಂಗಳೂರಿನಿಂದ- ಕಿ ಮೀ ದೂರದಲ್ಲಿದೆ. ಆಗಅಲ್ಲಿಗೆಬಸ್ಸಿನ ಸೌಕರ್ಯವಿತ್ತು. ಅದು ನಮ್ಮ ೧೦ ನೇ ತರಗತಿಯ ಪಬ್ಲಿಕ್ ಪರೀಕ್ಷಾ ಕೇಂದ್ರ. ೭ನೇ ತರಗತಿಯ ಪಬ್ಲಿಕ್ ಪೆರ್ರೆಕ್ಷೆಯಂತೇ ಈಗಲೂ ಅಲ್ಲಿಗೆ ಹೇಗೆ ಹೋಗುವುದು ,ಅಲ್ಲಿ ಎಲ್ಲಿ ಇರುವುದು, ಹೇಗೆ ನಿಭಾಯಿಸುವುದು ಎಂಬಿತ್ಯಾಡಿ ಪ್ರಶ್ನೆಗಳನ್ನು ಈಗ ನಾನು ಸ್ವತಃ ಎದುರಿಸಬೇಕಾಗಿತ್ತು. ಹಣದ ಸಮಸ್ಯೆ , ಊಟ ವಸತಿಯ ಸಮಸ್ಯೆ ಇತ್ಯಾದಿ. ಈಗಲೂ ಉತ್ತರ ಕರ್ನಾಟಕದ ಅನೇಕ ಪರೀಕ್ಷಾ ಕೇಂದ್ರಗಲ್ಲಿ ನಡೆಯುವಂತೆ , ಕಿಟಕಿಯ ಮೂಲಕ ಕಾಪಿ ಚೀಟಿ ಸರಬರಾಜು ಮಾಡಲು ಪ್ರತಿಯೊಬ್ಬ ವಿದ್ಯಾರ್ಥಿ- ಅಥವಾ ಅವರ ತಂದೆ ತಾಯಿ ಬೇರೊಬ್ಬ ಡ್ಸ್ ವ್ಯಕ್ತಿಯನ್ನೋ , ಹುಡುಗನನ್ನೋ ನೇಮಿಸಿಕೊಲ್ಲಬೇಕಾಗಿತ್ತು! ಆ ಭಾಗ್ಯ ನನಗೂ ಅಡಿವೆಪ್ಪನಿಗೂ ಇರಲಿಲ್ಲ . ನಮಗೇ ಊಟ, ವಸತಿಯ ಕಷ್ಟವಾಗಿದ್ದಾಗ , ನಾವು ಇನ್ನೊಬ್ಬರನ್ನು ನೇಮಿಸಿಕೊಂಡು ಅವರ ಊಟ ವಸತಿಯ ವ್ಯವಸ್ಥೆ ಮಾಡಿಕೊಟ್ಟು ಅವರ ಇತರೆ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲು ಸಾಧ್ಯವೇ ಇರಲಿಲ್ಲ . ನನಗೆ, ಅಡಿವೆಪ್ಪನಿಗೆ ಹೆಗ್ಗೋ ಇತರೆ ಕೆಲ ಹುಡುಗರಿಗೆ ಎರಡು ದಿನಕ್ಕೊಮ್ಮೆ ಊರಿನಿಂದ ಊಟದ ಬುತ್ತಿ ಬರುತ್ತಿತ್ತು. ನಾನೂ ಅಡಿವೆಪ್ಪನೂ ಆತ್ಮೀಯವಾಗಿದುದರಿಂದ ಹಂಚಿಕೊಂಡು ಜೊತೆಗೂಡಿ ತಿನ್ನುತ್ತಿದ್ದೆವು. ಅಂತೂ ಪರೀಕ್ಷೆ ಬರೆದು ಬಂದೆವು.
ಆಗ ಒಂದು ದಿನ ಈ ಘಟನೆ ನಡೆಯಿತು. ಅಲ್ಲಿ ಆಗ ಲಿಂಗಾಯಿತ-ವೀರಶೈವರಿಗೆ ಸೇರಿದ ಎರಡು ಮಠಗಳು ಮುಖ್ಯವಾಗಿ ಅವರ ಜಾತಿಯವರಿಗಾಗಿ ಬೇರೆ ಬೇರೆಯಾಗಿ ಊಟದ ವ್ಯವಸ್ಥೆ ಮಾಡುತ್ತಿದ್ದವು. ಆಗ ನಮಗೆ ಆ ಎರಡು ಪಂಗಡಗಳ ನಡುವೆ ವ್ಯತ್ಯಾಸ ಗೊತ್ತಿರಲಿಲ್ಲ. ಅಂತೂ ಆ ಎರಡು ಮಠಗಳ ನಡುವೆ ಒಂದು ರೀತಿಯ ಸ್ಪರ್ದ್ಧೆ ಹಾಗೂ ದ್ವೇಷ ಇದ್ದು ಹೆಚ್ಚು ಹೆಚ್ಚು ಹುಡುಗರನ್ನು ಸೆಳೆಯುವ ಗುರಿಯಿಟ್ಟುಕೊಂಡಿದ್ದವು. ಅಂತಹ ಒಂದು ದಿನ ನಾನೂ ಅಡಿವೆಪ್ಪನೂ ಮತ್ತೊಬ್ಬ ಕಾಪಿ ಚೀಟಿ ಕೊಡಲು ಬಂದಿದ್ದ ಚಿನಿವಾಲರ- ಬ್ರಾಹ್ಹ್ಮಣ ಹುಡುಗನೊಬ್ಬ ಯಾವುದೊ ಬಹುಷಃ ವೀರಶೈವ ಸಂಪ್ರದಾಯದ ಮಠವೊಂದಕ್ಕೆ ಸೇರಿದ್ದ ಮಠಕ್ಕೆ ಊಟ ಮಾಡಲು ಹೋಗಿದ್ದೆವು. ಅಲ್ಲಿ ಅವರು ಜಂಗಮರು ಮತ್ತು ವೀರಶೈವರನ್ನು ಮಾತ್ರ ಒಂದು ಎತ್ತರದ ಕಟ್ಟೆಯ ಮೇಲೆ ಕೂಡಿಸುತ್ತಿದ್ದರು. ಇತರರೆಲ್ಲ ಕೆಳಗಿನ ಸ್ಥಳದಲ್ಲಿ. ನಾನೂ ಅಡಿವೆಪ್ಪನೂ ಕೆಳಗೆ ಕುಳಿತೆವು. ಚಿನಿವಾಲರ ಬ್ರಾಹ್ಮಣ ಹುಡುಗ ಮಾತ್ರ ಯಾರಿಗೂ ತಿಳಿಯದು ಎಂತಲೋ , ಅಥವಾ ನಾವೇನೂ ಕಡಿಮೆಯಲ್ಲ ಎಂತಲೋ ಕಟ್ಟೆಯ ಮೇಲೆಯೇ ಕುಳಿತ. ಅಷ್ಟರಲ್ಲಿ ನಾವೇ ತೆಗೆದುಕೊಂಡು ಹೋಗಿದ್ದ ತಟ್ಟೆಯಲ್ಲಿ ಊಟ ಬಡಿಸಿಯಾಗಿತ್ತು. ಅದ್ಹೇಗೆ ಕಂಡು ಹಿಡಿದರೋ ನಾ ಕಾಣೆ . ಇವನು ಜಂಗಮನಲ್ಲ, ವೀರಶಿವನೂ ಅಲ್ಲ , ಆದರೆ ಕಟ್ಟೆಯ ಮೇಲೆ ಕುಳಿತಿದ್ದಾನೆ ಎಂದು ಬೈದು ಊಟದ ಸಾಲಿನಿಂದ ಎಬ್ಬಿಸಿ ಕೆಳಕ್ಕೆ ಕಳಿಸಿದರು . ಅಂದಿನಿಂದ ಮತ್ತೆ ನಾನು ಎಂದೂ ಅಂದರೆ ಪರೀಕ್ಷೆಯುದ್ದಕ್ಕೂ ಆ ಮಠದ ಕಡೆ ಮತ್ತೆ ತಲೆ ಹಾಕಲಿಲ್ಲ.
ಪರೀಕ್ಷಾ ಫಲಿತಾಂಶ
ನಮ್ಮ ಶಾಲೆಯಿಂದ ನಾವು ೧೮-೨೦ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದೆವು . ಕೆಲ ತಿಂಗಳ ನಂತರ ಫಲಿತಾಂಶವೂ ಬಂತು. ಮಿಶ್ರಫಲ . ಒಂದು ಕಡೆ ಸಂತೋಷವೂ, ಇನ್ನೊಂದು ಕಡೆ ದುಃಖವೂ ಆಗಿತ್ತು. ಕಾರಣ ನಮ್ಮ ಶಾಲೆಯಿಂದ ಬರೆದಿದ್ದ ಮಕ್ಕಳಲ್ಲಿ ಇಬ್ಬರು ಮಾತ್ರ ಪಾಸಾಗಿದ್ದರು. ಅದರಲ್ಲಿ ನಾನೊಬ್ಬನಾಗಿದ್ದೆ . ಆ ಇನ್ನೊಬ್ಬ ನಾನ್ನ ಮಿತ್ರ ಅಡಿವೆಪ್ಪನಾಗಿರಲಿಲ್ಲ. ನಮಗೆಲ್ಲ ಭಯ ಬೀಳಿಸಿದ್ದ ಆ ಇಂಗ್ಲಿಷ್ ರಾಕ್ಷಸ ನನ್ನೆಲ್ಲ ಸಹಪಾಠಿಗಳನ್ನು ನೆಲ ಕಚ್ಚುವಂತೆ ಮಾಡಿದ್ದ. ನಾನೂ , ಪಾಸಾದ ಆ ಇನ್ನೊಬ್ಬ ಸಹಪಾಠಿಯೂ ಇಂಗ್ಲೀಷಿನಲ್ಲಿ ಪಾಸಾಗಲು ಕನಿಷ್ಠ ಎಷ್ಟು ಅಂಕಗಳು ಬೇಕಾಗಿದ್ದಾವೋ ಅಷ್ಟನ್ನು ಮಾತ್ರ ಪಡೆದು ಉತ್ತೀರ್ಣರಾಗಿದ್ದೆವು. ಅಂತೂ ನಿಟ್ಟುಸಿರು ಬಿಡುವಂತಾಯಿತು. ಈಗ ಇಂಗ್ಲೀಷ ಕಲಿತಿದ್ದರೂ , ಆಗಿನ ನನ್ನಂಥವರ ಭಾವನೆಯನ್ನು ಸ್ವತಃ ಅರಿತ ನಾನು ಈಗಲೂ ಗ್ರಾಮೀಣ ಮಕ್ಕಳು ಇಂಗ್ಲೀಷ್ ಕಲಿಯಲಿ ಪಡಿಪಾಟಲು ನನಗೆ ಈ ಕಾರಣಕ್ಕಾಗಿ ಚೆನ್ನಾಗಿಯೇ ಅರ್ಥವಾಗುತ್ತದೆ.
ಇತರ ಘಟನೆಗಳು
ಒಂದು
ನಮ್ಮ ತಂದೆ ತಾಯಿಯವರು ಗೊಂಡಬಾಳಿನಲ್ಲಿ ಇದ್ದ ಕಾಲದಿಂದಲೂ ಚಿದಂಬರ ಭಕ್ತರಾಗಿದ್ದರು. ನಮ್ಮ ಮನೆಯಲ್ಲಿ ಚಿದಂಬರರ ಕುರಿತು ಸ್ತುತಿ ಹಾಡುಗಳನ್ನು ಹಾಡುತ್ತಿದ್ದರು, ಹಾಡಿಸುತ್ತಿದ್ದರು. ಅಂತಹ ಒಂದು ಹಾಡು “ ಪ್ರಾರ್ಥಿಪೇ ಪ್ರಭೋ ..... “ ಎಂಬ ಹಾಡು. ಹಾಗಾಗಿ ನಮ್ಮ ಸಹಜ ಒಲವು ಅತ್ತ ಕಡೆ ಇತ್ತು. ಮಂಗಳೂರಿನ ಹತ್ತಿರವೇ ಇರುವ ಒಣಗೇರಿ ಎಂಬ ಊರಿನಲ್ಲಿ ಪ್ರತಿ ವರ್ಷವೂ ಚಿದಂಬರ ಜಯಂತಿ ಆಚರಿಸಲಾಗುತ್ತಿತ್ತು. ಯಥಾ ರೀತಿ ಅಪ್ಪನ ಮರಣದ ನಂರ , ನಾವು ಅಂದರೆ ಅಕ್ಕ , ಅವ್ವ ಜಯಂತಿಯ ದಿನ ಒಣಗೇರಿಗೆ ಹೋಗುತ್ತಿದ್ದೆವು. ಆ ಊರು ನಮ್ಮ ಊರಿನಿಂದ ೫-೬ ಕಿ ಮೀ ದೂರವಿತ್ತು . ಅಲ್ಲಿಗೆ ಯಾವುದೇ ಬಸ್ಸಿನ ಸೌಕರ್ಯವಿರಲಿಲ್ಲ . ನಡೆದೇ ಅಂದಿನ ದಿನ ಬೆಳಗ್ಗೆ ನಾವು ಅಲ್ಲಿಗೆ ಹೋಗುತ್ತಿದ್ದೆವು. ಅದು ಒಂದು ಸಣ್ಣ ಹಳ್ಳಿಯಾದರೂ ಎಲ್ಲೆಲ್ಲಿಯಿಂದಲೋ ಬ್ರಾಹ್ಮಣ ಜನಸಾಗರ ಬಂದು ಸೇರುತ್ತಿತ್ತು. ದೂರದ , ಪೂನಾ, ಮುಂಬೈ ಮತ್ತಿತರ ದೊಡ್ಡ ದೊಡ್ಡ ಊರುಗಳಿಂದಲೂ ಅನೇಕ ಜನ ೨-೩ ದಿನ ಮೊದಲೇ ಬಂದು ಸೇರುತ್ತಿದ್ದರು. ಇಂದಿನ ಎಲ್ಲ ಕಡೆಯ ಉತ್ಸವಗಳಂತೆ , ಪೂಜೆ , ಹಾಡು ಇತರೆ ಆಚರಣೆಗಳು ನಡೆಲ್ತ್ತಿದ್ದವು. ಸಣ್ಣವನಾದ ನಾನು ಅಲ್ಲಿ ಇಲ್ಲಿ ಓಡಾಡುವುದರಲ್ಲೇ ಕಾಲಕಳೆದು ಊಟದ ಹೊತ್ತಿಗೆ ಊಟದ ಸಾಲಿನಲ್ಲಿರುತ್ತಿದ್ದೆ. ಅನಂತೂ ಸಾಯಂಕಾಲದ ಹೊತ್ತಿಗೆ ಮತ್ತೆ ನಡೆದು ಮಂಗಳೂರು ಸೇರುತ್ತಿದ್ದೆವು .
ಎರಡು
ಮಂಗಳೂರಿನದ್ದಾಗ ೯-೧೦ನೇ ತರಗತಿಯ ಕಾಲಾವಧಿಯಲ್ಲಿ, ಅಪ್ಪ ಸತ್ತ ನಂತರ ನಾನು ಉಪನಯನದ ವಟುವಾಗಿ ಕಾವೇರಿಬಾಯಿಯ ಮನೆಯಲ್ಲಿ ದಸರೆ, ಗಣೇಶ ಹಾಗೂ ಇತರೆ ಹಬ್ಬಗಳಲ್ಲಿ ಅವರ ಮನೆಗೆ ಪೂಜೆಗೆ ಮತ್ತು ಊಟಕ್ಕೆ ಹೋಗುತ್ತಿದ್ದೆ. ನಮ್ಮ ಮನೆ ಒಂದು ಕೊನೆಯಾದರೆ ಅವರದು ಇನ್ನೊಂದು ಕೊನೆ. ಅಲ್ಲಿಯವರೆಗೂ ಕಚ್ಚೆ ಪಂಚೆ ಹಾಕಿಕೊಂಡು ಊರ ತುಂಬೆಲ್ಲ ನಡೆದುಕೊಂಡು ಹೋಗುವುದು ಮುಜುಗುರದ ಸಂಗತಿಯಾಗಿತ್ತು. ಆದರೂ ಪ್ರೀತಿಯಿಂದ ಹಾಕುತ್ತಿದ್ದ ಪುಷ್ಕಳ ಭೋಜನ ಮತ್ತು ಆದರೋಪಚಾರಕ್ಕಾಗಿ , ಒಂದು ರೂಪಾಯಿ ದಕ್ಷಿಣೆಗಾಗಿ ಅದನ್ನೆಲ್ಲ ನಾನು ಮಾಡಲೇಬೇಕಾಗಿತ್ತು. ಆಗ ನನ್ನ ತಲೆಯಲ್ಲಿ ಯಾವುದೇ ವಿಚಾರಗಳು ತಲೆಯಲ್ಲಿ ಇರದಿದ್ದ ಕಾರಣ ಮುಜುಗುರದ ಹೊರತಾಗಿ ಮತ್ಯಾವ ತೊಂದರೆಯೂ ಇರಲಿಲ್ಲ. ಅಂತೂ ಆ ಒಂದು ಅನುಭವ ನಾನಾ ಜೀವನಕ್ಕೆ ಸೇರಿತು.
ಮೂರು
ಮಂಗಳೂರು ಗೊಂಡಬಾಳಿಗಿಂತ ದೊಡ್ಡ ಊರು. ಅಲ್ಲಿ ಬ್ರಾಹ್ಮಣರ ಮನೆಗಳೂ ಅನೇಕ . ಎಂದಿನಂತೆ ಲಿಂಗಾಯತರು ಅಧಿಕ. ಅಲ್ಲಿನ ಆಗಿನ ಶಾನುಭೋಗ ಶಂಕರಪ್ಪ - ಬ್ರಾಹ್ಮಣ . ಆತನ ವಿಶೇಷವೇ ಬೇರೊಂದಿದೆ. ಅದು ಈಗ ಅನಾವಶ್ಯಕ . ಸರಳವಾಗಿ ಒಂದು ಮಾತು . ಆತ ಗತ್ತು ಹಾಗೂ ಘನತೆಯಿಂದ ಶಾನುಭೋಗಿಕೆ ನಡೆಸುತ್ತಿದ್ದ. ಇತರರಿಗಿಂತ ತುಸು ವಿದ್ಯಾವಂತ. ತೋಟ , ಮನೆ ಆಸ್ತಿ ಇತ್ತು. ಆತನಿಗೆ ಮೊದಲು ಜಾತಿಯಲ್ಲೇ ಒಂದು ಮದುವೆಯಾಗಿತ್ತು. ಏನು ಕಾರಣವೂ ನಾ ತಿಳಿಯೆ , ಆತ ಆಕೆಯೊಂದಿಗೆ ಸಂಸಾರವನ್ನೇ ಮಾಡಲಿಲ್ಲ. ಅಂತಹ ಒಂದು ನೋವಿನ ಸಂದರ್ಭದಲ್ಲಿ ಆ ಹೆಂಡತಿ ನಮ್ಮ ಅಪ್ಪನಲ್ಲಿ ಭವಿಷ್ಯ ಕೇಳಲು ಬರುತ್ತಿದ್ದಳು. ಅವ್ವನೊಂದಿಗೆ ನೋವು ಹಂಚಿಕೊಳ್ಳುತ್ತಿದ್ದಳು. ಅಪ್ಪನೂ ಸಮಾಧಾನದ ಮಾತು ಹೇಳಿ ಕಲಿಸುತ್ತಿದ್ದ- ಜಾತಕ ಜ್ಯೋತಿಷ್ಯದ ಸಾಂತ್ವನದ ಮಾತುಗಳವು. ಕೆಲ ವರ್ಷಗಳ ನಂತರ ಆತನಿಗೂ ಲಿಂಗಾಯತ ಮಹಿಳೆಯ ಜೊತೆಗೆ ಸಂಬಂಧವೇರ್ಪಟ್ಟು ಮದುವೆಯೂ ಆಗಿ ಮಗನೂ ಜನಿಸಿದ. ಈ ಶಾನುಭೋಗ ಕಾಂಗ್ರೆಸ್ ಪಕ್ಷದ ಸದಸ್ಯ ಮತ್ತು ನೇತಾರನಾಗಿದ್ದ. ಮುಂದಿನ ಘಟನೆಗೆ ಇದು ಮುಖ್ಯ ನೆನಪಿನಲ್ಲಿಟ್ಟುಕೊಳ್ಳಿ .
ನಾಲ್ಕು
ಮಂಗಳೂರಿನಲ್ಲಿ ಎಲ್ಲ ಜಾತಿ ಜನಾಂಗಗಳಿದ್ದರೂ ಒಂದು ಮುಖ್ಯ ವ್ಯತ್ಯಾಸವನ್ನು ತಿಳಿಯಬೇಕು. ಅಲ್ಲಿ ಲಿಂಗಾಯತರೂ, ಇತರೆ ಓ ಬಿ ಸಿ ಗುಂಪಿಗೆ ಸೇರಿದ ಜನರಿದ್ದರು. ಬ್ರಹಮಾನ್ರ ಮನೆಗಳೂ ೧೦-೧೫ ಇದ್ದವು. ಬ್ರಾಹ್ಮಣ ಶಂಕರಪ್ಪ ಊರಿನ ಶಾನುಭೋಗ ಮತ್ತು ಕಾಂಗ್ರೆಸ್ ನೇತಾರ. ಮಂಗಳೂರಿನಲ್ಲಿ ಮುಚ್ಚಿಗೇರರು ಎಂದು ಕರೆಯಲ್ಪಡುತ್ತಿದ್ದ ಅಸ್ಪೃಶ್ಯ ಜಾತಿಯವರೂ ಸಾಕಷ್ಟು ಇದ್ದರು. ಮುಚ್ಚಿಗೇರರೆಂದರೆ - ದ್ ದಲಿತರು - ಹೊಲೆಯರೋ , ಮಾದಿಗರೋ ನನಗೆ ತಿಳಿಯದು. ಅವರು ಸಾಕಷ್ಟು ಸಂಖ್ಯೆಯಲ್ಲಿದ್ದರು. ಅಷ್ಟೇ ಅಲ್ಲ ಕಟ್ಟಿಗೆ ಕೊರೆಯುವ - ಸಾ ಮಿಲ್ ಇಟ್ಟುಕೊಂಡು ಆರ್ಥಿಕವಾಗಿಯೂ ಸಬಲರಾಗಿದ್ದರು. ಹೇಗೋ ಏನೋ ನನಗೆ ತಿಳಿಯದು , ಆಧುನಿಕ ವಿಚಾರಗಳೂ - ಅಂದರ ಸಮಾನತೆ ಬಯಸುವುದು , ದೇವಸ್ಥಾನ ಪ್ರವೇಶ, ನೀರಿನ ಬಾವಿಗೆ ಪ್ರವೇಶ ಇತ್ಯಾದಿಗಳಿಗೆ ಅವರು ಬೇಡಿಕೆ ಇಡುತ್ತಿದ್ದರು. ಅದರಿಂದ , ಅವರ ಆರ್ಥಿಕ ಶಕ್ತಿಯಿಂದ ಊರಿನ ಇತರೆ ಬಲಾಢ್ಯ ಜಾತಿಗಳೊಂದಿಗೆ ತಿಕ್ಕಾಟವಿತ್ತು. ಇಂತಹ ವಿಚಾರಗಳಲ್ಲಿ ಹೆಚ್ಚಾಗಿ ಊರಿನ ಇತರೆ ಜಾತಿಗಳ ಪ್ರತಿನಿಧಿಯಾಗಿದ್ದ ಮತ್ತು ಕಾಂಗ್ರೆಸ್ ನೇತಾರನಾಗಿದ್ದ ಶಂಕರಪ್ಪನಿಗೆ ಪೀಕಲಾಟಕ್ಕಿಟ್ಟುಕೊಳ್ಳುತ್ತಿತ್ತು. ಅಂತೂ ಕೊನೆಗೆ ಊರಿನಲ್ಲಿ ಕೆಟ್ಟ ಪರಿಸ್ಥಿತಿ ಏರ್ಪಟ್ಟಿತು . ಯಾವುದೋ ನೆಪದಲ್ಲಿ ದಲಿತರಿಗೂ, ಸವರ್ಣೀಯರಿಗೂ ಸಂತೇ ಪೇಟೆಯಲ್ಲಿ ಘರ್ಷಣೆ , ಹೊಡೆದಾಟವೇ ನಡೆಯಿತು. ಮೂಢ ಜನ , ಜಾತಿಯ ಕಾರಣದಿಂದಾಗಿ ಎತ್ತಿನ ಗಾಡಿಯ ಗಳು , ಬಡಿಗೆ ಇತ್ಯಾದಿ ಆಯುಧಗಳಿಂದ ಮುಚ್ಚಿಗೇರರ ಮೇಲೆ ಮುಗಿ ಬಿದ್ದರು. ಪಕ್ಷದ ಒತ್ತಾಯದಿಂದಾಗಿಯೋ , ಪರಿಸ್ಥಿತಿಯ ಒತ್ತಡದಿಂದಾಗಿಯೋ ಕಾಂಗ್ರೆಸ್ ನೇತಾರ ಶಾನುಭೋಗ ಶಂಕರಪ್ಪ ತಟಸ್ಥನಾಗಿ ಹಿನ್ನೆಲೆಗೆ ಸರಿದ. ಈ ಬೆಳವಣಿಗೆಯಿಂದಾಗಿ ಊರಿನ ಜನ ಶಂಕರಪ್ಪನ ಬದ್ಧತೆಯನ್ನು ಟೀಕಿಸಿದರು. ಅವನು ದ್ರೋಹಿ ಎಂಬಂತೆ ಚಿತ್ರಿಸಿದರು. ಆದರೆ ಇದಕ್ಕೆ ವ್ಯತಿರಕ್ತವಾಗಿ ಇನ್ನೊಬ್ಬ ಲಿಂಗಾಯತ ವ್ಯಕ್ತಿ ಯಾವ ಕಾರಣಕ್ಕಾಗೋ ನನಗೆ ತಿಳಿಯದು ದಲಿತರನ್ನು ಮುಕ್ತವಾಗಿ ಬೆಂಬಲಿಸಿ ಊರಿನ ಜನರಿಂದಲೂ , ಜಾತಿ, ಬಂದುಗಳಿಂದಲೂ ಸಾಮಾಜಿಕ ಬಹಿಷ್ಕಾರಕ್ಕೊಳಗಾದ. ಇಂದಿಗೂ ಆತನ ನಡೆ ನನಗೆ ನಿಗೂಢವಾಗುಳಿದರೂ , ಆತನ ಬದ್ಧತೆ ಮತ್ತು ಧಾರ್ಷ್ಠ್ಯತೆಯನ್ನು ಯೋಚಿಸಿದಾಗ ಆತನಿಗೆ ಶರಣು ಎಂದು ಹೇಳಬೇಕೆನಿಸುತ್ತೆ. ಆತ ಯಾರು , ಯಾಕೆ ಹಾಗೆ ದೃಢವಾಗಿ ದಲಿತ ಪರವಾಗಿ ನಿಂತಿದ್ದ ಎಂಬುದೂ ಈಗಲೂ ನನಗೆ ಅರ್ಥವಾಗದಾಗಿದೆ .
ಇದರ ಮುಂದಿನ ಹಂತವಾಗಿ , ಅತ್ಯಂತ ಧೃಢವಾಗಿ ನಿಂತಿದ್ದ ದಲಿತರು, ಆಗಿನ ರಾಜಕೀಯ ಕಾರಣಕ್ಕಾಗಿಯೂ - ಅಂದರೆ ದಲಿತಪರ ಕಾಂಗ್ರೆಸ್ ನೀತಿಯಿಂದಾಗಿ , ನಾವು ದೇವಸ್ಥಾನ ಪ್ರವೇಶಿಸೆಯೇ ತೀರುತ್ತೇವೆ ಎಂದು ಅತ್ಯಂತ ದೃಢವಾಗಿ ನಿಂತಿದ್ದರು. ಈಗಲೂ ಆಗಿನ ಘಟನೆಯ ಬಗೆಗೆ ತಿಳಿಯಬೇಕೆಂಬ ಕುತೂಹಲ ಉತ್ಕಟವಾಗುತ್ತಿದೆ . ಅದು ಎಲ್ಲಿಯಾದರೂ ದಲಿತ ಹೋರಾಟದ ಇತಿಹಾಸದಲ್ಲಿ ದಾಖಲಾಗಿದೆಕೋ ಇಲ್ಲವೋ ನನಗೆ ಗೊತ್ತಿಲ್ಲ. ಖಂಡಿತವಾಗಿಯೂ ಅದು ದಾಖಲಾಗಲೇಬೇಕಾದ ಸಂಗತಿಯೇ . ಮುಂದಿನ ಹೋರಾಟ ಹೇಗೆ ಅಂತಿಮ ರೂಪ ಪಡೆಯಿತೋ ನನಗೆ ತಿಳಿದಿಲ್ಲ. ಅಂತೂ ಒಂದು ದಿನ ಜಿಲ್ಲಾ ಎಸ್ ಪಿ ಸಮೇತ ಒಂದು ದೊಡ್ಡ ಪೊಲೀಸ್ ಪಡೆ ಬಂದೂಕು ವ್ಯಾನುಗಳೊಂದಿಗೆ ಮಂಗಳೂರಿಗೆ ಬಂದೇ ಬಂತು. ಬಹುಸಂಖ್ಯಾತ ಜನಕ್ಕೆ ಇಷ್ಟವಿರಲಿಲ್ಲ ; ಅವರಲ್ಲಿ ಅಸಹನೆ ಅಸಮಾಧಾನ ಮನೆಮಾಡಿತ್ತು. ಕಾನೂನಿಗಿಂತಲೂ ಅವರು ಪೊಲೀಸ್ ಪಡೆಗೆ ಅವರು ಹೆದರಿದ್ದರು. ಏನು ಮಾಡಬೇಕೆಂದು ತಿಳಿಯದೆ ಅಸಹಾಯಕರಾಗಿದ್ದರು.
ಒಂದು ದಿನ ನೋಡ ನೋಡುತ್ತಿದ್ದಂತೆ ಪೊಲೀಸ್ ರಕ್ಷಣೆಯೊಂದಿಗೆ ನಾವು ವಾಸವಿದ್ದ ಉಪ್ಪಾರ ಓಣಿಯ ಬಾವಿಯ ಹತ್ತಿರ ಒಂದಿಷ್ಟು ಜನ ಅಂದರೆ ಮುಚ್ಚಿಗೇರರ ಮುಖಂಡರಿರಬಹುದು ಹಗ್ಗ , ಕೊಡಗಳ ಸಮೇತ ಬಂದರು. ನನ್ನನ್ನೂ ಸೇರಿದಂತೆ ಸವರ್ಣೀಯ ಜನ ನಿಂತು ನಡೆಯಬಹುದಾದ, ಇಷ್ಟವಿರದ ಘಟನೆಯನ್ನು ಕುತೂಹಲದಿಂದ ನೋಡುತ್ತಿದ್ದರು. ಒಂದಿಷ್ಟು ಜನ ದಲಿತ ಮುಖಂಡರು ಕೊಡಕ್ಕೆ ಹಗ್ಗ ಕಟ್ಟಿ ಬಾವಿಗೆ ಇಳಿಬಿಟ್ಟರು. ನೀರು ಸೇದಿದರು. ಸಾಧಿಸಿದರು. ಅವರಿಗೆ ಬೇಕಾದ್ದನ್ನು ಪಡೆದರು. ಬಂದಷ್ಟೇ ವೇಗದಲ್ಲಿ ಮುಂದಿನ ಬಾವಿಗೆ ತೆರಳಿದರು. ಕೊನೆಗೆ ಅವರು ಊರಿನ ಮುಖ್ಯ ಗುಡಿಯಾಗಿದ್ದ ಮಂಗಳೇಶನ ಗುಡಿಯನ್ನೂ ಪ್ರವೇಶಿಸಿದರು. ಆಗ ನನ್ನನ್ನೂ ಸೇರಿದಂತೆ ಊರಿನ ಸವರ್ಣೀಯ ಜನಕ್ಕೆ ಬೇಸರವಾಗಿದ್ದರೂ ಈಗ ನನಗೆ ನಮ್ಮ ಊರಿನ ದಲಿತ ಜನರ ಸಾಧನೆಗೆ ಹೆಮ್ಮೆಯೆನಿಸುತ್ತದೆ.
ಮುಂದಿನ ದಿನಗಳಲ್ಲಿ ಊರಿನಲ್ಲಿ ಶಂಕರಪ್ಪ ಅನಾದರ ,ಅಗೌರವಗಳಿಗೆ ಎರವಾದ. ದಲಿತರನ್ನು ಯಾವ ಕಾರಣಕ್ಕೋ ಬೆಂಬಲಿಸಿದ್ದ ಆ ಲಿಂಗಾಯತ ವ್ಯಕ್ತಿ ಊರಿನ ಜನರಿಂದಲೂ, ಜಾತಿಯ ಜನರಿಂದಲೂ , ಕಡೆಗೆ ಕುಟುಂಬದವರಿಂದ ಬಹಿಷ್ಕೃತನಾಗಿ ಕೆಲ ಕಾಲ ಊರಿನ ಜನರ ಹಲ್ಲೆಯ ಭಯದಿಂದ ತಲೆಮರೆಸಿಕೊಂಡಿದ್ದ. ಹೀಗಿತ್ತು ಆ ಘಟನೆ . ಇದು ನಡೆದಿದ್ದು ೧೯೭೪ರಲ್ಲಿರಬಹುದು. ಅಂದಿನ ಇಂತಹ ಸಾಧನೆಗೆ ಅದೆಷ್ಟು ತಯಾರಿ ನಡೆದಿತ್ತೋ ! ಇದರ ಸಾಧನೆಗೆ ಕಾರಣರಾದ ಎಲ್ಲರಿಗೂ ನನ್ನದೊಂದು ನಮನ.
ಒಟ್ಟಾರೆ ಹೀಗೆ ಮಂಗಳೂರಿನಲ್ಲಿ ನನ್ನ ಮೂರು ವರ್ಷದ ಜೀವನ ಹಾಗೂ ವಿದ್ಯಾಭಾಸ ಭಾವನೆ ತಾಪತ್ರಯ ಮತ್ತು ವೈವಿಧ್ಯಮಯ ಅನುಭವಗಳೊಂದಿಗೆ ಮುಗಿಯಿತು.
Comments
Post a Comment