Posts

ಭಾಗ -೨ (ಯಾದ್ನ್ಯವಲ್ಕ್ಯ)

Image
Audio available ಮಂಗಳೂರು ವಾಸ - ಹೈಸ್ಕೂಲು ವಿದ್ಯಾಭಾಸ Audio: ಮಂಗಳೂರು ವಾಸ - ಹೈಸ್ಕೂಲು ವಿದ್ಯಾಭಾಸ ೧೯೭೧-೧೯೭೪ ಎಲ್ಲ ವಿಚಾರ ಪರಾಮರ್ಶೆ ನಂತರ ೧೯೭೧ರ  ಶಾಲಾ ದಾಖಲಾತಿಯ ಹೊತ್ತಿಗೆ  ನಾವು ಮಂಗಳೂರಿಗೆ ಬಂದೆವು. ಒಂದು ಎತ್ತಿನ ಗಾಡಿಯ ಸಾಮಾನು ತಂದೆವು. ಕೆಲವೊಂದು ಸಾಮಾನುಗಳನ್ನು  ಇನ್ನೂ   ಗೊಂಡಬಾಳಿನಲ್ಲಿಯೇ ಇಟ್ಟು  ಬಂದಿದ್ದೆವು.  ಇಂತಹ ವಸ್ತುಗಳಲ್ಲಿ ನನಗೆ ನೆನಪಿಗೆ ಬರುವ ಹಾಗೆ ಹಳೆಯ ಚಂದಮಾಮ ಪುಸ್ತಕಗಳು , ಜೊತೆಗೆ ಬಹುಶಹ  ಗೋರಖಪುರ ಪ್ರೆಸ್ಸಿನವರು ಪ್ರಕಟಿಸಿರಿಬಹುದಾದ  ತುಂಬಾ ಆಕರ್ಷಕ ಬಣ್ಣದ ಚಿತ್ರಗಳೂ   ಇದ್ದ ಭಾಗವತ , ರಾಮಾಯಣ , ಮಹಾಭಾರತಗಳ    ಪುಸ್ತಕಗಳು .  ಅವನ್ನು ನಮ್ಮ ಮನೆಯಲ್ಲಿ ಇದ್ದ ಕಟ್ಟಿಗೆಯ ಕಪಾಟಿನಲ್ಲಿ ಇಟ್ಟು  ಬಂದಿದ್ದೆವು.  ಸರಿಯಾಗಿ ಬಾಗಿಲು,  ಬೀಗ ಹಾಕದ ಮನೆಗೆ ಶಾಲಾ ಮಕ್ಕಳು ನುಗ್ಗಿ ಪುಸ್ತಕಗಳಲ್ಲಿನ  ಚಿತ್ರಗಳಿಂದ ಆಕರ್ಷಿತರಾಗಿ ಎಲ್ಲ ಚಲ್ಲಾಪಿಲ್ಲಿ ಮಾಡಿ ಹೋಗಿದ್ದರು.  ಆ ಪುಸ್ತಕಗಳ ಜೊತೆಗೆ ಇತರ ಕೆಲ ಪುಸ್ತಕಗಳೂ ಮತ್ತು ತಂದೆ ಬರೆದಿಟ್ಟಿದ್ದ ನಮ್ಮ ಮನೆಯವರ ಎಲ್ಲ ಜಾತಕಗಳೂ ಕಳೆದುಹೋದವು. ಅಲ್ಲಿಗೆ ಅಂದಿನಿಂದ ನಮಗೆ ಜಾತಕಗಳಿಂದ ಮುಕ್ತಿಯೂ ಸಿಕ್ಕಿತು!      ಟಿ ಬಿ  ಕಾಯಿಲೆಯಿಂದ ಅಪ್ಪ ನಿತ್ರಾಣರಾಗಿ , ಅಸಹಾಯಕರಾಗಿ ನೆಲ ಹಿಡಿದಿದ್ದರು ಎಂದು ನ...

ಭಾಗ -೧ (ಯಾದ್ನ್ಯವಲ್ಕ್ಯ)

ಭಾಗ -೧ ಬಾಲ್ಯ  ನನ್ನ ಮತ್ತು ನಮ್ಮ  ಊರು ಗೊಂಡಬಾಳು. ಈಗಿನ ಕೊಪ್ಪಳ ಜಿಲ್ಲೆಯ ಒಂದು ಗ್ರಾಮ . ಅದು ಕೊಪ್ಪಳದಿಂದ ಸುಮಾರು ೧೦ ಕಿ ಮೀ  ದೂರದಲ್ಲಿದೆ .ಸುಮಾರು ೧೫೦ ಮನೆಗಳ ಗ್ರಾಮ .ಉತ್ತರ ಕರ್ನಾಟಕದ ಎಲ್ಲ ಹಳ್ಳಿಗಳಂತೆ  ಅತ್ಯಂತ ಹಿಂದುಳಿದ ಹಳ್ಳಿ. ಹೆಚ್ಚಿನ ಸಂಖ್ಯೆಯಲ್ಲಿ ಅನಕ್ಷರಸ್ಥರೇ ಇದ್ದ ಗೊಂಡಬಾಳಿನಲ್ಲಿ ಎಲ್ಲ ಜಾತಿ ಜನಾಂಗದವರೂ ಇದ್ದರು . ಮುಖ್ಯವಾಗಿ ಮತ್ತು ಪ್ರಧಾನ ಸ್ಥಾನದಲ್ಲಿ ಎಲ್ಲ ಉತ್ತರ ಕರ್ನಾಟಕದ ಹಳ್ಳಿಗಳಂತೆ ಲಿಂಗಾಯತರು  ಇದ್ದರು. ನಂತರದ ಸ್ಥಾನದಲ್ಲಿ ಕುರುಬರು,  ಆರ್ಯರು ಎಂದು ಕರೆಯುವ  ಕೃಷಿ ಪ್ರಧಾನ  ಉದ್ಯೋಗದ ಜನರೂ  ಹಾಗು ಭೂರಹಿತ ಹರಿಜನರೂ  ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು .  ಉತರ ಕರ್ನಾಟಕದ ಗ್ರಾಮವಾದ್ದರಿಂದ  ಬ್ರಿಟಿಷರಷ್ಟೆ ದೀರ್ಘಕಾಲ ಆಳಿದ ನಿಜಾಮರ ಪ್ರಭಾವದಿಂದಾಗಿ  ಮುಸ್ಲಿಮರೂ ಸಾಕಷ್ಟು ಸಂಖ್ಯೆಲ್ಲಿದ್ದರು . ಕ್ರಿಶ್ಚಿಯನ್ನರಿದ್ದದ್ದು ನನ್ನ ನೆನಪಿಗೆ ಬರುತಿಲ್ಲ . ಬಹುಶಹ   ಇರಲಿಲ್ಲವೇನೋ? ವೈಶ್ಯರ ಎರಡು ಮನೆಗಳೂ , ಬ್ರಾಹ್ಮಣರ  ೨ ಮನೆಗಳೂ - ಇವುಗಳಲ್ಲಿ ನಮ್ಮದೊಂದು ಇದ್ದವು .  ಇದೆಲ್ಲ ವಿವರ ೬೦ ರ  ದಶಕದಲ್ಲಿದ್ದಂತೆ , ಹಾಗೂ  ನನ್ನ ತಿಳುವಳಿಕೆಗೆ ಬಂದಿದ್ದಂತೆ .        ಹಾಗೆಯೇ ಇಲ್ಲಿ  ಒಂದು ವಿಷಯ - ನಮ್ಮ ಊರು ಹಳೆಯ ಗೊಂಡಬಾಳು ಮಾತು ಹೊಸ...